ADVERTISEMENT

ಚೆಸ್‌: ಡ್ರಾ ಮಾಡಿಕೊಂಡ ಆನಂದ್‌

ಪಿಟಿಐ
Published 29 ಜೂನ್ 2019, 19:45 IST
Last Updated 29 ಜೂನ್ 2019, 19:45 IST
ವಿಶ್ವನಾಥನ್‌ ಆನಂದ್‌
ವಿಶ್ವನಾಥನ್‌ ಆನಂದ್‌   

ಜಾಜ್ರೆಬ್‌, ಕ್ರೊವೇಷ್ಯಾ (ಪಿಟಿಐ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿಶ್ವನಾಥನ್‌ ಆನಂದ್‌, ಗ್ರ್ಯಾಂಡ್‌ ಚೆಸ್‌ ಟೂರ್‌ನ (ಎರಡನೇ ಲೆಗ್‌) ಮೂರನೇ ಸುತ್ತಿನಲ್ಲಿ ಡ್ರಾ ಮಾಡಿಕೊಂಡಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಪೈಪೋಟಿಯಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್‌ ಆನಂದ್‌, ಅರ್ಮೇನಿಯಾದ ಲೆವೊನ್‌ ಅರೋನಿಯನ್‌ ಜೊತೆ ಪಾಯಿಂಟ್‌ ಹಂಚಿಕೊಂಡರು.

ಮೊದಲ ಸುತ್ತಿನ ಪೈಪೋಟಿಯಲ್ಲಿ ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ಎದುರು ಸೋತಿದ್ದ ಆನಂದ್‌, ನಂತರದ ಹೋರಾಟದಲ್ಲಿ ವಿಶ್ವಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಎದುರು ಡ್ರಾ ಸಾಧಿಸಿದ್ದರು.

ADVERTISEMENT

ಮೂರು ಪಂದ್ಯಗಳಿಂದ ಒಂದು ಪಾಯಿಂಟ್‌ ಗಳಿಸಿರುವ ಭಾರತದ ಆಟಗಾರ, ಪಾಯಿಂಟ್ಸ್‌ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ.

ರಷ್ಯಾದ ನೆಪೊಮ್ನಿಯಾಚಿ, ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ಅವರ ಖಾತೆಯಲ್ಲಿ ಮೂರು ಪಾಯಿಂಟ್‌ ಇದೆ. ಮೂರನೇ ಸುತ್ತಿನಲ್ಲಿ ನೆಪೊಮ್ನಿಯಾಚಿ, ಅಜರ್‌ಬೈಜಾನ್‌ನ ಶಖ್ರಿಯಾರ್‌ ಮಮೆಡ್ಯರೋವ್‌ ಎದುರು ಗೆದ್ದರು. ಎರಡನೇ ಸುತ್ತಿನಲ್ಲಿ ಅವರು ಅಮೆರಿಕದ ಫಾಬಿಯಾನೊ ಕರೊನಾ ಅವರನ್ನು ಸೋಲಿಸಿದ್ದರು.

ನಾರ್ವೆಯ ಕಾರ್ಲ್‌ಸನ್‌ ಮತ್ತು ಅಮೆರಿಕದ ವೆಸ್ಲಿ ಸೊ ಅವರು ತಲಾ ಎರಡು ಪಾಯಿಂಟ್‌ ಕಲೆಹಾಕಿದ್ದು ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.