ADVERTISEMENT

ರಾಜ್ಯ ಯೂತ್‌ ವಾಲಿಬಾಲ್: 16ರ ಸುತ್ತಿಗೆ ಸ್ಪೋರ್ಟಿಂಗ್‌, ಬೀಗಲ್ಸ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 16:32 IST
Last Updated 17 ಮಾರ್ಚ್ 2025, 16:32 IST
   

ಬೆಂಗಳೂರು: ತೀವ್ರ ಹೋರಾಟದ ಪಂದ್ಯದಲ್ಲಿ ಬೆಂಗಳೂರು ಸ್ಪೋರ್ಟಿಂಗ್‌ ತಂಡ 47–45 ಅಂಕಗಳಿಂದ ಬೆಂಗಳೂರು ವ್ಯಾನ್‌ಗಾರ್ಡ್ ತಂಡವನ್ನು ಸೋಲಿಸಿ ರಾಜ್ಯ ಯೂತ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಿಕ್ವಾರ್ಟರ್‌ ಫೈನಲ್ ತಲುಪಿತು.

ಬಸವನಗುಡಿಯ ಎಂಎನ್‌ ಕೃಷ್ಣರಾವ್ ಪಾರ್ಕ್ ಬ್ಯಾಸ್ಕೆಟ್‌ಬಾಲ್ ಅಂಕಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಈ ಪಂದ್ಯದ ಮಧ್ಯಂತರ ವೇಳೆಗೆ ಸ್ಕೋರ್‌ 23–23ರಲ್ಲಿ ಸಮನಾಗಿತ್ತು. ಸ್ಪೋರ್ಟಿಂಗ್ ಪರ ವಿಹಾನ್ (15 ಅಂಕ), ಸಾಯಿ (10) ಹೆಚ್ಚು ಅಂಕ ಗಳಿಸಿದರೆ, ವ್ಯಾನ್‌ಗಾರ್ಡ್ ಪರ ಧ್ರುವ್‌ (13) ಗಮನ ಸೆಳೆದರು.

ಇನ್ನೊಂದು ಪಂದ್ಯದಲ್ಲಿ ಸೌರವ್ ಅವರ 21 ಪಾಯಿಂಟ್‌ಗಳ ನೆರವಿನಿಂದ ಬೀಗಲ್ಸ್‌ 39–25 ರಿಂದ ಪಟ್ಟಾಭಿ ಕ್ರೀಡಾಕ್ಲಬ್ ತಂಡವನ್ನು ಮಣಿಸಿತು. ಪಟ್ಟಾಭಿ ಪರ ಮಾನಸ್ 18 ಅಂಕ ಗಳಿಸಿದರು. ಏಕಪಕ್ಷೀಯವಾಗಿದ್ದ ಇನ್ನೊಂದು ಪಂದ್ಯದಲ್ಲಿ ಪಿಪಿಸಿ ತಂಡ 51–11ರಿಂದ ಕೋಲಾರ ತಂಡವನ್ನು, ಹೆಬ್ಬಾಳ ಬಿ.ಸಿ. 31‍–14 ರಿಂದ ದೇವಾಂಗ ಬಿ.ಸಿ. ತಂಡವನ್ನು, ದ.ಕ. ಜಿಲ್ಲಾ ತಂಡ 39–22 ರಿಂದ ಮೌಂಟ್ಸ್‌ ಬಿ.ಸಿ. ತಂಡವನ್ನು ಮಣಿಸಿದವು.

ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಸ್ಪೋರ್ಟಿಂಗ್ ತಂಡ 22–17 ರಿಂದ ಬಿಸಿವೈಎ ತಂಡವನ್ನು, ವಿದ್ಯಾನಗರದ ಡಿವೈಇಎಸ್‌ ತಂಡ 43–12 ರಿದ ಹೊಸಕೋಟೆ ಬಿ.ಸಿ. ತಂಡವನ್ನು, ಹಾಸನ ಜಿಲ್ಲೆ 41–28 ಪಾಯಿಂಟ್‌ಗಳಿಂದ ರಾಜಮಹಲ್ ತಂಡವನ್ನು, ಬೀಗಲ್ಸ್‌ ಬಿ.ಸಿ. 42–10 ರಿಂದ ಬೆಳಗಾವಿ ಜಿಲ್ಲೆ ತಂಡವನ್ನು, ವಿಮಾನಪುರ ತಂಡ 26–9 ರಿಂದ ಪಟ್ಟಾಭಿ ಕ್ರೀಡಾ ಕ್ಲಬ್ ತಂಡವನ್ನು ಸೋಲಿಸಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.