ADVERTISEMENT

ದಕ್ಷಿಣ ವಲಯ ಅಂತರ ವಿವಿ ಹಾಕಿ ಟೂರ್ನಿ: ವಿಟಿಯು, ಕ್ರೈಸ್ಟ್ ತಂಡಗಳ ಜಯದ ಆರಂಭ

ದಕ್ಷಿಣ ವಲಯ ಅಂತರ ವಿವಿ ಹಾಕಿ ಟೂರ್ನಿ: ಕರ್ನಾಟಕ, ಧಾರವಾಡ, ದಾವಣಗೆರೆ ವಿವಿಗಳಿಗೆ ಸೋಲು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 13:55 IST
Last Updated 26 ಡಿಸೆಂಬರ್ 2021, 13:55 IST
ಸೇಲಂನ ಪೆರಿಯಾರ್ ವಿವಿ ಹಾಗೂ ಕೋಟಯಂನ ಎಂಜಿ ವಿವಿ ತಂಡಗಳ ನಡುವಿನ ಪಂದ್ಯದ ನೋಟ
ಸೇಲಂನ ಪೆರಿಯಾರ್ ವಿವಿ ಹಾಗೂ ಕೋಟಯಂನ ಎಂಜಿ ವಿವಿ ತಂಡಗಳ ನಡುವಿನ ಪಂದ್ಯದ ನೋಟ   

ಬೆಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮತ್ತು ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾಲಯ ತಂಡಗಳು ಬೆಂಗಳೂರು ವಿಶ್ವವಿದ್ಯಾಲಯ ಆಶ್ರಯದಲ್ಲಿಭಾನುವಾರ ಆರಂಭಗೊಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಹಾಕಿ ಟೂರ್ನಿಯಲ್ಲಿ ಜಯ ಸಾಧಿಸಿದವು.

ವಿಟಿಯು 7–0ಯಿಂದ ಕಲಬುರ್ಗಿಯ ಗುಲ್ಬರ್ಗ ವಿವಿಯನ್ನು ಮತ್ತು ಕ್ರೈಸ್ಟ್ ವಿವಿ 1–0ಯಿಂದ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯನ್ನು ಮಣಿಸಿತು. ದಾವಣಗೆರೆ ವಿವಿ, ಮಂಗಳೂರು ವಿವಿ ಮತ್ತುಧಾರವಾಡದ ಕರ್ನಾಟಕ ವಿವಿ ತಂಡಗಳು ಸೋತವು.

ಉದ್ಘಾಟನಾ ಪಂದ್ಯದಲ್ಲಿ ಕಣ್ಣೂರು ವಿವಿ 2–1ರಲ್ಲಿ ಧಾರವಾಡ ವಿವಿಯನ್ನು ಮಣಿಸಿದರೆ ಕೋಟಯಂನ ಮಹಾತ್ಮ ಗಾಂಧಿ ವಿವಿ 1–0ಯಿಂದ ಸೇಲಂನ ಪೆರಿಯಾರ್‌ ವಿವಿಯನ್ನು ಸೋಲಿಸಿತು. ಕಾರೈಕುಡಿಯ ಅಳಗಪ್ಪ ವಿವಿ 3–1ರಲ್ಲಿ ಕಾಕಿನಾಡದ ಜೆಎನ್‌ಟಿಯುವನ್ನು, ಕಡಪದ ಯೋಗಿ ವೇಮನ ವಿವಿ 12–0ಯಿಂದ ದಾವಣಗೆರೆ ವಿವಿಯನ್ನು, ತಿರುಪತಿಯ ಶ್ರೀ ವೆಂಕಟೇಶ್ವರ ವಿವಿ 4–2ರಲ್ಲಿ ಕೊಯಮತ್ತೂರಿನ ರಾಮಕೃಷ್ಣ ಮಿಷನ್‌ ತಂಡವನ್ನು ಸೋಲಿಸಿತು.

ADVERTISEMENT

ಮಹೆಬೂಬ್‌ನಗರದ ಪಾಲಮುರು ವಿವಿ 6–0ಯಿಂದ ಕರೀಂ ನಗರದ ಶಾತವಾಹನ ವಿವಿಯನ್ನು, ತಿರುವಳ್ಳೂರಿನ ಮನೋನ್ಮಣಿಯಂ ಸುಂದರರ್ ವಿವಿ 9–0ಯಿಮದ ಆಂಧ್ರದ ರಾಯಲ್‌ಸೀಮಾ ವಿವಿಯನ್ನು, ಚೆನ್ನೈನ ಅಣ್ಣಾ ವಿವಿ 5–0ಯಿಂದ ನೆಲಗೊಂಡದ ಎಂಜಿ ವಿವಿಯನ್ನು, ಕೇರಳ ವಿವಿ 7–0ಯಿಂದ ಶ್ರೀಕಾಕುಳಂನ ಡಾ.ಬಿ.ಆರ್‌.ಅಂಬೇಡ್ಕರ್ ವಿವಿಯನ್ನು, ವಿಶಾಖಪಟ್ಟಣದ ಆಂಧ್ರ ವಿವಿ 2–1ರಲ್ಲಿ ಮೆಳ್ಳಕೊಟ್ಟಿಯೂರ್‌ನ ಟಿಎನ್‌ಪಿಎಸ್‌ಯುವನ್ನು ಮತ್ತು ಹೈದರಾಬಾದ್‌ನ ಒಸ್ಮಾನಿಯಾ ವಿವಿ 6–0ಯಿಂದ ಮಂಗಳೂರು ವಿವಿಯನ್ನು ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.