ADVERTISEMENT

ಮೆಡ್ವೆಡೆವ್‌, ರಫೆಲ್‌ ನಡಾಲ್ ಯಾರು ಗೆಲ್ಲುವರು ಫೈನಲ್‌?

ಏಜೆನ್ಸೀಸ್
Published 29 ಜನವರಿ 2022, 19:49 IST
Last Updated 29 ಜನವರಿ 2022, 19:49 IST
ರಫೆಲ್ ನಡಾಲ್ –ಎಎಫ್‌ಪಿ ಚಿತ್ರ
ರಫೆಲ್ ನಡಾಲ್ –ಎಎಫ್‌ಪಿ ಚಿತ್ರ   

ಮೆಲ್ಬರ್ನ್‌: 21 ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳ ದಾಖಲೆಯ ಬೆನ್ನುಹತ್ತಿರುವ ರಫೆಲ್‌ ನಡಾಲ್ ಎದುರು ಒಂದೇ ಪಂದ್ಯ ಬಾಕಿ ಇದೆ. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಗೆದ್ದರೆ ಅವರು ‘ಬಿಗ್‌ ತ್ರಿ’ ಪೈಕಿ ಇಬ್ಬರಾದ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್‌ ಅವರನ್ನು ಹಿಂದಿಕ್ಕಿ ಟೆನಿಸ್ ಅಂಗಣದ ರಾಜ ಎನಿಸಿಕೊಳ್ಳಲಿದ್ದಾರೆ.

ಎಲ್ಲ ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಕನಿಷ್ಠ ಎರಡು ಬಾರಿ ಗೆದ್ದ ಸಾಧನೆಗೆ ಪಾತ್ರರಾಗುವುದಕ್ಕೂ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಪ್ರಶಸ್ತಿ ಅವರಿಗೆ ಅಗತ್ಯ. ಇದೆಲ್ಲವನ್ನು ಸಾಧಿಸಲು ಅವರು ಡ್ಯಾನಿಲ್ ಮೆಡ್ವೆಡೆವ್ ಅವರ ಸವಾಲು ಮೀರಿ ನಿಲ್ಲಬೇಕು.

21 ಪ್ರಶಸ್ತಿಗಳ ದಾಖಲೆಯ ಕನಸಿನೊಂದಿಗೆ ಕಳೆದ ಬಾರಿ ಅಮೆರಿಕ ಓಪನ್ ಟೂರ್ನಿಯ ಫೈನಲ್‌ನಲ್ಲಿ ಕಣಕ್ಕೆ ಇಳಿದಿದ್ದ ಜೊಕೊವಿಚ್‌ ಅವರ ಆಸೆಗೆ ಮೆಡ್ವೆಡೆವ್ ತಣ್ಣೀರು ಸುರಿದಿದ್ದರು. ಆಸ್ಟ್ರೇಲಿಯನ್ ಓಪನ್‌ನಲ್ಲೂ ಅವರು ಇಂಥದೇ ಫಲಿತಾಂಶವನ್ನು ಪುನರಾವರ್ತನೆ ಮಾಡುವರೇ ಅಥವಾ ರಫೆಲ್ ಗೆದ್ದು ಬೀಗುವರೇ ಎಂಬುದು ಟೆನಿಸ್ ಲೋಕದಕುತೂಹಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.