ADVERTISEMENT

ಬಾಕ್ಸಿಂಗ್‌: ಸೋನಿಯಾ, ಪಿಂಕಿ ಕ್ವಾರ್ಟರ್‌ ಫೈನಲ್‌ಗೆ

ಪಿಟಿಐ
Published 2 ಜನವರಿ 2019, 18:59 IST
Last Updated 2 ಜನವರಿ 2019, 18:59 IST

ವಿಜಯನಗರ, ಬಳ್ಳಾರಿ ಜಿಲ್ಲೆ : ಸೋನಿಯಾ ಲಾಥರ್‌ ಮತ್ತು ಸಿಮ್ರನ್‌ಜೀತ್ ಕೌರ್‌ ಇಲ್ಲಿ ನಡೆಯುತ್ತಿರುವ ಮಹಿಳೆಯರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಪಿಂಕಿ ಜಂಗ್ರ ಮತ್ತು ಮನೀಷಾ ಮೌನ್‌ ಕೂಟ ಎಂಟರ ಘಟ್ಟಕ್ಕೆ ಪ್ರವೇಶಿಸಿದರು.

ಬುಧವಾರದ ಬೌಟ್‌ನಲ್ಲಿ ಹರಿಯಾಣದ ಪಿಂಕಿ 51 ಕೆಜಿ ವಿಭಾಗದ ಬೌಟ್‌ನಲ್ಲಿ ದೆಹಲಿಯ ಪ್ರತಿಭಾ ಎದುರು ಗೆದ್ದರು. ಪಂಜಾಬ್‌ನ ಸಿಮ್ರನ್‌ಜೀತ್‌ 64 ಕೆಜಿ ವಿಭಾಗದಲ್ಲಿ ಹಿಮಾಚಲಪ್ರದೇಶದ ಸಂಧ್ಯಾ ಅವರನ್ನು ಮಣಿಸಿದರು. 54 ಕೆಜಿ ವಿಭಾಗದಲ್ಲಿ ಮನಿಷಾ, ದೆಹಲಿಯ ರಿಯಾ ಟೊಕಾಸ್ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT