ADVERTISEMENT

ಮಹಿಳೆಯರ ಇಂಡಿಯನ್‌ ಓಪನ್‌ ಗಾಲ್ಫ್‌ ರದ್ದು

ಪಿಟಿಐ
Published 30 ಜೂನ್ 2020, 21:23 IST
Last Updated 30 ಜೂನ್ 2020, 21:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುರುಗ್ರಾಮ: ಈ ವರ್ಷದ ಅಕ್ಟೋಬರ್‌ನಲ್ಲಿ ನಿಗದಿಯಾಗಿದ್ದ ಮಹಿಳೆಯರ ಇಂಡಿಯನ್‌ ಓಪನ್‌ ಗಾಲ್ಫ್‌ ಟೂರ್ನಿಯನ್ನು ಕೋವಿಡ್‌ ಹಿನ್ನೆಲೆಯಲ್ಲಿ ಮಂಗಳವಾರ ರದ್ದು ಮಾಡಲಾಗಿದೆ.

ಈ ಟೂರ್ನಿಯು ಲೇಡೀಸ್‌ ಯೂರೋಪಿಯನ್‌ ಟೂರ್‌ನ ಸಹಭಾಗಿತ್ವದಲ್ಲಿ ನಡೆಯುತ್ತಿತ್ತು. ಮುಂದಿನ ವರ್ಷದ ಟೂರ್ನಿಯು ಅಕ್ಟೋಬರ್‌ ತಿಂಗಳಲ್ಲಿ ಗುರುಗ್ರಾಮದ ಡಿಎಲ್‌ಎಫ್‌ ಗ್ಯಾರಿ ಪ್ಲೇಯರ್‌ ಅಂಗಣ ಹಾಗೂ ಕಂಟ್ರಿ ಕ್ಲಬ್‌ ಅಂಗಣದಲ್ಲಿ ನಡೆಯಲಿದೆ.

‘ಆಟಗಾರರು ಮತ್ತಿತರರ ಆರೋಗ್ಯ ಸುರಕ್ಷತೆಯನ್ನು ಆದ್ಯತೆಯಾಗಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಭಾರತ ಮಹಿಳಾ ಗಾಲ್ಫ್‌ ಸಂಸ್ಥೆ (ಡಬ್ಲ್ಯುಜಿಎಐ) ಹಾಗೂ ದ ಲೇಡೀಸ್‌ ಯೂರೋಪಿಯನ್‌ ಟೂರ್‌ (ಎಲ್‌ಇಟಿ) ಸ್ಪಷ್ಟಪಡಿಸಿವೆ.

ADVERTISEMENT

‘ಇದೊಂದು ಬಹಳ ಕಠಿಣ ನಿರ್ಧಾರ. ಆದರೆ ಕೋವಿಡ್‌ ಪಿಡುಗು ಸೃಷ್ಟಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಟೂರ್ನಿಯನ್ನು ರದ್ದುಗೊಳಿಸುವುದು ಸೂಕ್ತವಾದ ನಿರ್ಧಾರ’ ಎಂದುಡಬ್ಲ್ಯುಜಿಎಐ ಅಧ್ಯಕ್ಷೆ ಕವಿತಾ ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.