ADVERTISEMENT

ವಿಶ್ವ ಆರ್ಚರಿ: ಭಾರತ ತಂಡಕ್ಕೆ 2 ಪದಕ ಖಚಿತ

ಪಿಟಿಐ
Published 6 ಸೆಪ್ಟೆಂಬರ್ 2025, 16:03 IST
Last Updated 6 ಸೆಪ್ಟೆಂಬರ್ 2025, 16:03 IST
ಆರ್ಚರಿ
ಆರ್ಚರಿ   

ಗ್ವಾಂಗ್‌ಜು (ದಕ್ಷಿಣ ಕೊರಿಯಾ): ಭಾರತದ ಬಿಲ್ಗಾರರು, ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು. ಪುರುಷರ ಕಾಂಪೌಂಡ್‌ ಆರ್ಚರಿ ತಂಡ ವಿಭಾಗದಲ್ಲಿ ಮತ್ತು ಮಿಶ್ರ ತಂಡ ವಿಭಾಗದಲ್ಲಿ ಶನಿವಾರ ಫೈನಲ್ ತಲುಪಿದ್ದು, ಕನಿಷ್ಠ ಎರಡು ಪದಕಗಳನ್ನು ಖಾತರಿಪಡಿಸಿಕೊಂಡಿದ್ದಾರೆ.

ಒತ್ತಡದಲ್ಲೂ ಏಕಾಗ್ರತೆ ಪ್ರದರ್ಶಿಶಿಸಿದ ಪುರುಷರ ತಂಡ ಮೂರು ಪಂದ್ಯಗಳನ್ನು ಜಯಿಸಿತು. ಆಸ್ಟ್ರೇಲಿಯಾವನ್ನು ಶೂಟ್‌ ಆಫ್‌ನಲ್ಲಿ, ಅಮೆರಿಕವನ್ನು ಒಂದು ಪಾಯಿಂಟ್‌ನಿಂದ, ಟರ್ಕಿಯನ್ನು ಎರಡು ಪಾಯಿಂಟ್‌ಗಳಿಂದ ಸೋಲಿಸಿತು. ಭಾನುವಾರ ಚಿನ್ನದ ಪದಕದ ಹಣಾಹಣಿಯಲ್ಲಿ ಫ್ರಾನ್ಸ್ ತಂಡವನ್ನು ಎದುರಿಸಲಿದೆ. 23 ವರ್ಷ ವಯಸ್ಸಿನ ರಿಷಭ್ ಯಾದವ್ ಭಾರತ ತಂಡದ ಕ್ವಾಲಿಫಿಕೇಷನ್‌ನಲ್ಲಿ 709 ಪಾಯಿಂಟ್ಸ್ ಕಲೆಹಾಕಿದರು.

ಮಿಶ್ರ ತಂಡ ವಿಭಾಗದಲ್ಲಿ ಅವರು 29 ವರ್ಷ ವಯಸ್ಸಿನ ಜ್ಯೋತಿ ಸುರೇಖಾ ವೆಣ್ಣಂ ಜೊತೆಗೂಡಿ, ಜರ್ಮನಿ, ಎಲ್‌ ಸಾಲ್ವಡಾರ್ ಮತ್ತು ಚೀನಾ ತೈಪಿಯ ಸ್ಪರ್ಧಿಗಳನ್ನು ಸುಲಭವಾಗಿ ಸೋಲಿಸಿದರು. ಭಾನುವಾರ ಚಿನ್ನದ ಪದಕಕ್ಕೆ ನಡೆಯುವ ಫೈನಲ್‌ನಲ್ಲಿ ನೆದರ್ಲೆಂಡ್ಸ್‌ನ ಜೋಡಿಯನ್ನು ಎದುರಿಸಲಿದೆ. ಜ್ಯೋತಿ ಅವರಿಗೆ ಇದು ಏಳನೇ ವಿಶ್ವ ಚಾಂಪಿಯನ್‌ಷಿಪ್‌ ಸ್ಪರ್ಧೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.