ADVERTISEMENT

ವಿಶ್ವ ಚೆಸ್‌ ಬಾಕ್ಸಿಂಗ್‌: ಆರ್ಯನ್‌ ಸೂರ್ಯಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 6:46 IST
Last Updated 30 ನವೆಂಬರ್ 2022, 6:46 IST
ಆರ್ಯನ್‌ ಸೂರ್ಯ
ಆರ್ಯನ್‌ ಸೂರ್ಯ   

ಬೆಂಗಳೂರು: ನಗರದ ಆರ್ಯನ್‌ ಸೂರ್ಯ ಅವರು ಟರ್ಕಿಯ ಅಂತಾಲ್ಯದಲ್ಲಿ ಇತ್ತೀಚೆಗೆ ನಡೆದ 4ನೇ ವಿಶ್ವ ಚೆಸ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಕೆಡೆಟ್‌ ಬಾಲಕರ (60 ಕೆ.ಜಿ.) ವಿಭಾಗದಲ್ಲಿ ಚಿನ್ನ ಗೆದ್ದರು.

ಜೈನ್‌ ಹೆರಿಟೇಜ್‌ ಶಾಲೆಯ 8ನೇ ತರಗತಿ ವಿದ್ಯಾರ್ಥಿಯಾಗಿರುವ ಅವರು ಇದೇ ಚಾಂಪಿಯನ್‌ಷಿಪ್‌ನ 18 ವರ್ಷದೊಳಗಿನವರ ವಿಭಾಗದಲ್ಲಿ ಬೆಳ್ಳಿ ಹಾಗೂ ಮುಕ್ತ ವಿಭಾಗದಲ್ಲಿ ಕಂಚಿನ ಪದಕವನ್ನೂ ಜಯಿಸಿದರು.

ಚೆಸ್‌ ಆಡಿದ ಬಳಿಕ ಎದುರಾಳಿಯ ವಿರುದ್ಧ ಬಾಕ್ಸಿಂಗ್‌ ಕೂಡಾ ಮಾಡುವ ‘ಚೆಸ್‌ ಬಾಕ್ಸಿಂಗ್‌’ ಕ್ರೀಡೆ ವಿದೇಶಗಳಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿದ್ದು, ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ಜನಪ್ರಿಯತೆ ಪಡೆಯುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.