ADVERTISEMENT

ಅರ್ಹತೆ ಗಳಿಸಲು ಮನು ವಿಫಲ

ವಿಶ್ವಕಪ್‌ ಶೂಟಿಂಗ್‌ ಫೈನಲ್ಸ್: ನಿರಾಸೆ ಮೂಡಿಸಿದ ರಾಹಿ ಸರ್ನೋಬತ್‌

ಪಿಟಿಐ
Published 20 ನವೆಂಬರ್ 2019, 19:06 IST
Last Updated 20 ನವೆಂಬರ್ 2019, 19:06 IST
ಮನು ಭಾಕರ್‌–ಎಎಫ್‌ಪಿ ಚಿತ್ರ
ಮನು ಭಾಕರ್‌–ಎಎಫ್‌ಪಿ ಚಿತ್ರ   

ಪುತಿಯಾನ್‌ (ಚೀನಾ): ಭಾರತದ ಮನು ಭಾಕರ್‌ ಹಾಗೂ ರಾಹಿ ಸರ್ನೋಬತ್‌ ಅವರು ವಿಶ್ವಕಪ್‌ ಶೂಟಿಂಗ್‌ ಫೈನಲ್ಸ್‌ ಟೂರ್ನಿಯ 25 ಮೀಟರ್‌ ಏರ್ ಪಿಸ್ತೂಲ್‌ ವಿಭಾಗದ ಫೈನಲ್ಸ್‌ಗೆ ಅರ್ಹತೆ ಗಳಿಸುವಲ್ಲಿ ವಿಫಲರಾದರು.

ಕಾಮನ್‌ವೆಲ್ತ್‌ ಗೇಮ್ಸ್ ಚಿನ್ನದ ಪದಕ ವಿಜೇತೆ ಮನು, ಬುಧವಾರ ನಡೆದ ಅರ್ಹತಾ ಸುತ್ತಿನ ಪ್ರಿಸಿಷನ್‌ ಹಾಗೂ ರ‍್ಯಾಪಿಡ್‌ ವಿಭಾಗಗಳಲ್ಲಿ ಕ್ರಮವಾಗಿ 292 ಹಾಗೂ 291 (ಒಟ್ಟು 583) ಪಾಯಿಂಟ್ಸ್‌ ಗಳಿಸಿದರು.

ಇತರ ಇಬ್ಬರು ಶೂಟರ್‌ಗಳಾದಜರ್ಮನಿಯ ಡೊರೀನ್‌ ವೆನ್‌ಕ್ಯಾಂಪ್‌ ಹಾಗೂ ಆಸ್ಟ್ರೇಲಿಯಾದ ಎಲೆನಾ ಗಲಿಬೊವಿಚ್‌ ಅವರು ಮನು ಗಳಿಸದಷ್ಟೇ ಪಾಯಿಂಟ್ಸ್‌ ಕಲೆಹಾಕಿದರು. ಆದರೆ ಇನ್ನರ್ಸ್ 10 (10 ಮೀಟರ್‌ ಅಂತರದಿಂದ ಶೂಟ್‌ ಮಾಡುವುದು) ಸುಪಿರಿಯಾರಿಟಿ ಆಧಾರದ ಮೇಲೆ ಡೊರೀನ್‌ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸುವಲ್ಲಿ ಯಶಸ್ವಿಯಾದರು.

ADVERTISEMENT

ಇನ್ನೊಂದೆಡೆ ರಾಹಿ ಅವರು ತೀವ್ರ ನಿರಾಸೆ ಮೂಡಿಸಿದರು. ಏಷ್ಯನ್‌ ಗೇಮ್ಸ್ ಚಿನ್ನದ ಪದಕ ವಿಜೇತ ಶೂಟರ್‌ 569 ಪಾಯಿಂಟ್ಸ್‌ಗಳೊಂದಿಗೆ ಅರ್ಹತಾ ಸುತ್ತನ್ನು ಕೊನೆಯವರಾಗಿ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.