ಶಾಂಘೈ: ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ವಿಶ್ವಕಪ್ ಕಪ್ ಸ್ಟೇಜ್–2 ಆರ್ಚರಿಯ ಕಾಂಪೌಂಡ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಸೋತು ಹೊರಬಿದ್ದವು.
ಜ್ಯೋತಿ ಸುರೇಖಾ ವೆನ್ನಂ, ಅದಿತಿ ಸ್ವಾಮಿ ಮತ್ತು ಅವನೀತ್ ಕೌರ್ ಅವರನ್ನೊಳಗೊಂಡ ಭಾರತ ಮಹಿಳಾ ತಂಡ ಬುಧವಾರ ನಡೆದ ಪಂದ್ಯದಲ್ಲಿ 228–231 ರಲ್ಲಿ ಟರ್ಕಿಯ ಎದುರು ಪರಾಭವಗೊಂಡಿತು.
ಓಜಸ್ ದೇವತಾಳೆ, ರಿಷಭ್ ಯಾದವ್ ಮತ್ತು ಪ್ರಥಮೇಶ್ ಜಾವ್ಕರ್ ಅವರನ್ನೊಳಗೊಂಡ ಪುರುಷರ ತಂಡ 231–234 ರಲ್ಲಿ ಮೆಕ್ಸಿಕೊ ಎದುರು ಸೋತಿತು. ಮಹಿಳಾ ಮತ್ತು ಪುರುಷರ ತಂಡಗಳಿಗೆ ಕ್ರಮವಾಗಿ ಮೂರು ಹಾಗೂ ಐದನೇ ಶ್ರೇಯಾಂಕ ನೀಡಲಾಗಿತ್ತು.
ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ಓಜಸ್ ಮತ್ತು ಜ್ಯೋತಿ ಸುರೇಖಾ ಅವರು ಕಣದಲ್ಲಿದ್ದಾರೆ. ರಿಕರ್ವ್ ವಿಭಾಗದಲ್ಲಿ ಭಾರತ ಮಹಿಳಾ ತಂಡಕ್ಕೆ ಮೊದಲ ಸುತ್ತಿನಲ್ಲಿ ‘ಬೈ’ ಲಭಿಸಿದ್ದು, ನೇರವಾಗಿ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಆಡಲಿದೆ. ಪುರುಷರ ತಂಡವೂ ಮೊದಲ ಸುತ್ತಿನಲ್ಲಿ ‘ಬೈ’ ಪಡೆದಿದ್ದು, ಎರಡನೇ ಸುತ್ತಿನಲ್ಲಿ ಚೀನಾ ತೈಪೆಯನ್ನು ಎದುರಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.