ADVERTISEMENT

ವಿಶ್ವ ಕುಬ್ಜರ ಕ್ರೀಡಾಕೂಟ; ದೇವಪ್ಪ, ಮಂಜುಳಾಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2023, 23:54 IST
Last Updated 3 ಆಗಸ್ಟ್ 2023, 23:54 IST
ಮಂಜುಳಾ ಗೊರಗುದ್ದಿ
ಮಂಜುಳಾ ಗೊರಗುದ್ದಿ   

ಹುಬ್ಬಳ್ಳಿ/ಬೆಳಗಾವಿ: ಜರ್ಮನಿಯಲ್ಲಿ ನಡೆದಿರುವ ಕುಬ್ಜರ ಎಂಟನೇ ವಿಶ್ವ ಕ್ರೀಡಾಕೂಟದಲ್ಲಿ ಧಾರವಾಡ ಜಿಲ್ಲೆಯ ದೇವಪ್ಪ ಮೋರೆ ಎರಡು ಚಿನ್ನದ ಪದಕ ಮತ್ತು ಬೆಳಗಾವಿ ಜಿಲ್ಲೆಯ ಮಂಜುಳಾ ಗೊರಗುದ್ದಿ ತಲಾ ಒಂದು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗಳಿಸಿದ್ದಾರೆ.

ದೇವಪ್ಪ 60 ಮೀ. ಓಟವನ್ನು 10.8 ಸೆಕೆಂಡ್‌ ಮತ್ತು 100 ಮೀ. ಓಟವನ್ನು 18.80 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದಾರೆ.

ಮಂಜುಳಾ ಮಹಿಳೆಯರ ಮುಕ್ತ ವಿಭಾಗದ ಗುಂಡು ಎಸೆತ ಸ್ಪರ್ಧೆಯಲ್ಲಿ ಚಿನ್ನ, ಚಕ್ರ ಎಸೆತದಲ್ಲಿ ಬೆಳ್ಳಿ ಮತ್ತು ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದರು.

ADVERTISEMENT
ದೇವಪ್ಪ ಮೋರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.