ADVERTISEMENT

ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್‌: ಭಾರತದ ಶ್ರೀಕಾಂತ್‌ಗೆ ನಿರಾಶೆ

ಲೀ ಝಿಲ್ ಜಿಯಾ ಮೇಲುಗೈ

ಪಿಟಿಐ
Published 3 ಡಿಸೆಂಬರ್ 2021, 12:14 IST
Last Updated 3 ಡಿಸೆಂಬರ್ 2021, 12:14 IST
ಮಲೇಷ್ಯಾದ ಲೀ ಝೀ ಜಿಯಾ ಅಟ
ಮಲೇಷ್ಯಾದ ಲೀ ಝೀ ಜಿಯಾ ಅಟ   

ಬಾಲಿ: ಭಾರತದ ಕಿದಂಬಿ ಶ್ರೀಕಾಂತ್ ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್‌ ನಲ್ಲಿ ಸೋತು ಹೊರಬಿದ್ದರು.

ಶುಕ್ರವಾರ ನಡೆದ ಬಿ ಗುಂಪಿನ ಮೂರನೇ ಪಂದ್ಯದಲ್ಲಿ ಶ್ರೀಕಾಂತ್ 19–21, 14–21 ರಿಂದ ಮಲೇಷ್ಯಾನದ ಲೀ ಝಿಲ್ ಜಿಯಾ ವಿರುದ್ಧ ಸೋತರು. 37 ನಿಮಿಷ ನಡೆದ ಪಂದ್ಯದಲ್ಲಿ ಶ್ರೀಕಾಂತ್ ಶರಣಾದರು.

ಈ ಋತುವಿನಲ್ಲಿ ಶ್ರೀಕಾಂತ್ ಅವರು ಲೀ ಎದುರು ಎರಡನೇ ಬಾರಿ ಸೋತಿದ್ದಾರೆ. ಈಚೆಗೆ ಹೈಲೊ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿಯೂ ಶ್ರೀಕಾಂತ್ ಲೀ ಎದುರು ಪರಾಭವಗೊಂಡಿದ್ದರು.

ADVERTISEMENT

ಪಂದ್ಯದ ಮೊದಲ ಗೇಮ್‌ನಲ್ಲಿ ಶ್ರೀಕಾಂತ್ ಆರಂಭದಲ್ಲಿಯೇ 0–3ರ ಹಿನ್ನಡೆ ಅನುಭವಿಸಿದರು. ಆದರೆ ಪುಟಿದೆದ್ದ ಅವರು 9–8ರ ಮುನ್ನಡೆ ಸಾಧಿಸಿದರು. ಅರ್ಧವಿರಾಮದ ವೇಳೆಗೆ ಲೀ 11–9ರ ಮುನ್ನಡೆ ಸಾಧಿಸಿದರು. ನಂತರದ ಆಟ ತುರುಸಿನಿಂದ ಕೂಡಿತ್ತು. ಸತತ ಪಾಯಿಂಟ್‌ಗಳೊಂದಿಗೆ ಶ್ರೀಕಾಂತ್ 17–15ರ ಮುನ್ನಡೆ ಗಳಿಸಿದ್ದರು. ಆದರೆ ಲೀ ಚುರುಕಿನ ಆಟದ ಮೂಲಕ ಮೇಲುಗೈ ಸಾಧಿಸಿದರು.

ಎರಡನೇ ಗೇಮ್‌ನಲ್ಲಿ ಶ್ರೀಕಾಂತ್ 7–3ರ ಮುನ್ನಡೆ ಸಾಧಿಸಿ, ತಿರುಗೇಟು ನೀಡುವತ್ತ ಹೆಜ್ಜೆಯಿಟ್ಟಿದ್ದವು. ಈ ಹಂತದಲ್ಲಿ ಲೀ ಮತ್ತೆ ತಿರುಗೇಟು ಕೊಟ್ಟರು. ಶ್ರೀಕಾಂತ್‌ಗೆ ಕಠಿಣ ಸವಾಲೊಡ್ಡಿದರು. 13–9ರ ಮುನ್ನಡೆ ಸಾಧಿಸುವಲ್ಲಿ ಲೀ ಯಶಸ್ವಿಯಾದರು. ಇದರ ನಂತರ ಶ್ರೀಕಾಂತ್ ಮಂಕಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.