ADVERTISEMENT

ಬಬಿತಾ ಪೋಗಟ್ ಸೋದರ ಸಂಬಂಧಿ ರಿತಿಕಾ ಪೋಗಟ್ ಆತ್ಮಹತ್ಯೆ: ವರದಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 7:16 IST
Last Updated 18 ಮಾರ್ಚ್ 2021, 7:16 IST
ಸಾಂದರ್ಭಿಕ ಚಿತ್ರ (ಚಿತ್ರ ಕೃಪೆ: ಐಸ್ಟೋಕ್)
ಸಾಂದರ್ಭಿಕ ಚಿತ್ರ (ಚಿತ್ರ ಕೃಪೆ: ಐಸ್ಟೋಕ್)   

ನವದೆಹಲಿ: ಭಾರತದ ಖ್ಯಾತ ಕುಸ್ತಿಪಟುಗಳಾದ ಗೀತಾ ಹಾಗೂ ಬಬಿತಾ ಪೋಗಟ್ ಸೋದರ ಸಂಬಂಧಿ ರಿತಿಕಾ ಪೋಗಟ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿವೆ.

ಕುಸ್ತಿ ಪಂದ್ಯಾವಳಿಯೊಂದರಲ್ಲಿ ಫೈನಲ್‌ನಲ್ಲಿ ಸೋತ ಬಳಿಕ ತೀವ್ರ ಆಘಾತ ಹಾಗೂ ಮನನೊಂದಿರುವ ರಿತಿಕಾ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗಿದೆ.

ಭಾರತ್‌ಪುರದಲ್ಲಿ ಮಾರ್ಚ್ 12ರಿಂದ 14ರ ವರೆಗೆ ನಡೆದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ರಿತಿಕಾ ಪೋಗಟ್ ಭಾಗವಹಿಸಿದ್ದರು.

ADVERTISEMENT

ಚಿಕ್ಕಪ್ಪ ಹಾಗೂ ಪ್ರಸಿದ್ಧ ಕುಸ್ತಿಪಟು ಮಹಾವೀರ್ ಸಿಂಗ್ ಪೋಗಟ್ ಮನೆಯಲ್ಲಿ ರಿತಿಕಾ ಅವರ ಮೃತದೇಹ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.