ADVERTISEMENT

ಕುಸ್ತಿ: ಸೆಮಿಫೈನಲ್‌ಗೆ ಪೂಜಾ ಗೆಹ್ಲೋಟ್

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 20:07 IST
Last Updated 31 ಅಕ್ಟೋಬರ್ 2019, 20:07 IST

ಬುಡಾಪೆಸ್ಟ್ (ಪಿಟಿಐ): ಭಾರತರ ಪೂಜಾ ಗೆಹ್ಲೋಟ್ ಇಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ 53 ಕೆಜಿ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು.

ಅರ್ಹತಾ ಸುತ್ತಿನಲ್ಲಿ ಆಡಿ ಮುಖ್ಯ ಹಂತ ಪ್ರವೇಶಿಸಿದ್ದ ಪೂಜಾ ಅತ್ಯಮೋಘ ಸಾಮರ್ಥ್ಯ ತೋರಿ ಕ್ವಾರ್ಟರ್ ಫೈನಲ್‌ನಲ್ಲಿ ರಷ್ಯಾದ ಎಕತೆರಿನಾ ವರ್ಬಿನಾ ವಿರುದ್ಧ 8–0ರ ಗೆಲುವು ಸಾಧಿಸಿದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ಅವರು 2018ರ ಯುರೋಪಿಯನ್ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರುವ ಜೈನೆಪ್ ಯೆಟ್‌ಗಿಲ್ ವಿರುದ್ಧ ಸೆಣಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT