ADVERTISEMENT

ವಿಶ್ವ ಟೇಬಲ್‌ ಟೆನಿಸ್‌: ಕರ್ನಾಟಕದ ಮೂವರಿಗೆ ಕಂಚಿನ ಪದಕ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 15:24 IST
Last Updated 3 ಜನವರಿ 2026, 15:24 IST
ಕರ್ನಾಟಕದ ಸಾತ್ವಿಕ್ ಎಂ., ಯುಕ್ತಾ ಹರ್ಷ ಮತ್ತು ಸಿದ್ಧಾಂತ್ ಎಂ.
ಕರ್ನಾಟಕದ ಸಾತ್ವಿಕ್ ಎಂ., ಯುಕ್ತಾ ಹರ್ಷ ಮತ್ತು ಸಿದ್ಧಾಂತ್ ಎಂ.   

ಬೆಂಗಳೂರು: ಕರ್ನಾಟಕದ ಸಿದ್ಧಾಂತ್ ಎಂ, ಸಾತ್ವಿಕ್ ಎಂ. ಮತ್ತು ಯುಕ್ತಾ ಹರ್ಷ ಅವರು ವಡೋದರದಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್‌ ಟೆನಿಸ್‌(ಡಬ್ಲ್ಯುಟಿಟಿ)ಯೂತ್‌ ಕಂಟೆಂಡರ್‌ನ 13 ವರ್ಷದೊಳಗಿನ ವಿಭಾಗದ ಸಿಂಗಲ್ಸ್‌ನಲ್ಲಿ ಕಂಚಿನ ಪ‍ದಕ ಗೆದ್ದರು.

ಬಾಲಕರ ಸೆಮಿಫೈನಲ್‌ನಲ್ಲಿ ಅಶ್ವಜಿತ್ ಎಂ. 5-11, 11-5, 6-11, 11-3, 11-6ರಿಂದ ಸಾತ್ವಿಕ್‌ ಅವರನ್ನು; ದೇವ್‌ ಪ್ರಣವ್‌ ಭಟ್‌ 11-5, 5-11, 11-9, 11-5ರಿಂದ ಸಿದ್ಧಾಂತ್‌ ಅವರನ್ನು ಮಣಿಸಿದರು.

ಬಾಲಕಿಯರ ಸೆಮಿಫೈನಲ್‌ನಲ್ಲಿ ದಿವಿಜಾ ಪೌಲ್ 11-2, 12-10, 11-5ರಿಂದ ಯುಕ್ತಾ ಅವರನ್ನು ಸೋಲಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.