ADVERTISEMENT

ಚೆಸ್‌ ಚಾಂಪಿಯನ್‌ಷಿಪ್‌: ಯುವನೇಶ್‌, ಶ್ರೇಯಾ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 15:55 IST
Last Updated 31 ಜುಲೈ 2025, 15:55 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ನಗರದ ಯುವನೇಶ್‌ ಎ. ಮತ್ತು ಶ್ರೇಯಾ ರಾಜೇಶ್‌ ಅವರು ಹಾಸನದಲ್ಲಿ ಇತ್ತೀಚೆಗೆ ನಡೆದ ರಾಜ್ಯ 13 ವರ್ಷದೊಳಗಿನವರ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಓಪನ್ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಹಾಸನ ಜಿಲ್ಲಾ ಚೆಸ್‌ ಸಂಸ್ಥೆಯು ಹಾರನಹಳ್ಳಿ ರಾಮಸ್ವಾಮಿ ಇನ್‌ಸ್ಟಿಟ್ಯೂಷನ್ ಆಫ್‌ ಹೈಯರ್‌ ಎಜುಕೇಷನ್‌ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಈ ಚಾಂಪಿಯನ್‌ಷಿಪ್‌ನಲ್ಲಿ, ಕ್ರೈಸ್ಟ್‌ (ಐಸಿಎಸ್‌ಇ) ಶಾಲೆಯ ಯುವನೇಶ್‌ 9 ಸುತ್ತುಗಳಿಂದ 8 ಪಾಯಿಂಟ್ಸ್‌ ಸಂಗ್ರಹಿಸಿದರು. ಇಂದಿರಾನಗರದ ಎನ್‌ಪಿಎಸ್‌ ಶಾಲೆಯ ಅಭಿನವ್‌ ಆನಂದ್ (7.5 ಪಾಯಿಂಟ್ಸ್‌) ಎರಡನೇ ಸ್ಥಾನ ಪಡೆದರು.

ಬಾಲಕಿಯರ ವಿಭಾಗದಲ್ಲಿ ಇಂದಿರಾನಗರದ ಡಿಪಿಎಸ್‌ ಈಸ್ಟ್‌ ಶಾಲೆಯ ಶ್ರೇಯಾ ರಾಜೇಶ್‌ 9 ಸುತ್ತುಗಳಿಂದ 8 ‍ಪಾಯಿಂಟ್ಸ್ ಕಲೆಹಾಕಿದರೆ, ಉತ್ತರ ಕನ್ನಡ ಜಿಲ್ಲೆ ಕೈಗಾದ ಅಟೊಮಿಕ್‌ ಎನರ್ಜಿ ಸೆಂಟ್ರಲ್‌ ಸ್ಕೂಲ್‌ನ ಅನ್ವಿತಾ ಸಾತಿ (7.5) ಎರಡನೇ ಸ್ಥಾನ ಪಡೆದರು.

ADVERTISEMENT

350 ಮಂದಿ ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದರು. ಮೇಲ್ಕಂಡ ವಿಜೇತ ಆಟಗಾರರು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡ ಪ್ರತಿನಿಧಿಸಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.