ADVERTISEMENT

ಎಲ್ಲಿ ವಾಸ?

ಮಾಡಿ ನಲಿ ಸರಣಿ-23

ಪ್ರೊ.ಸಿ ಡಿ ಪಾಟೀಲ್
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST
ಎಲ್ಲಿ ವಾಸ?
ಎಲ್ಲಿ ವಾಸ?   

ಪ್ರಶ್ನೆ : ಎರೆಹುಳು ಎಲ್ಲಿ ಇರಲು ಪ್ರಯತ್ನಿಸುತ್ತದೆ? ಯಾಕೆ?

ಉತ್ತರ: ಎರೆಹುಳುವನ್ನು ಎಡ ಬದಿಯಿಂದ ಬಿಟ್ಟರೆ ಅದು ಬಲಕ್ಕೆ (ಕತ್ತಲು) ಚಲಿಸಿ ಅಲ್ಲೇ ಉಳಿಯುತ್ತದೆ ಹಾಗೂ ಬಲ ಬದಿಯಿಂದ ಬಿಟ್ಟರೆ ಅಲ್ಲೇ ಉಳಿದುಕೊಳ್ಳುತ್ತದೆ. ಅಂದರೆ ಎರೆಹುಳು ಕತ್ತಲೆಯನ್ನು ಇಷ್ಟಪಡುತ್ತದೆ ಎಂದರ್ಥ.

ಸಾಮಗ್ರಿ: ಎರಡೂ ಕಡೆ ತೆರೆದಿರುವ ಪ್ರನಾಳ, ಎರೆಹುಳು, ಅರಳೆ, ಕಪ್ಪು ಕಾಗದ.

ವಿಧಾನ:
1. ಎರಡೂ ಕಡೆ ತೆರೆದಿರುವ 20 ಸೆ.ಮೀ. ಉದ್ದದ ಗಾಜಿನ ನಳಿಕೆಯನ್ನು ತೆಗೆದುಕೊಳ್ಳಿ.

2. ಚಿತ್ರದಲ್ಲಿ ತೋರಿಸಿರುವಂತೆ ಅರ್ಧ ಭಾಗವನ್ನು ಕಪ್ಪು ಕಾಗದದಿಂದ ಸುತ್ತಿ ಗೋಂದಿನಿಂದ ಅಂಟಿಸಿ.

3. ನಳಿಕೆಯ ಬಲ ಬಾಯಿಗೆ ಅರಳೆ ಇಟ್ಟು ಬಂದ್ ಮಾಡಿ.

4. ಈಗ ಎಡ ತುದಿಯಿಂದ ಒಂದು ಎರೆಹುಳುವನ್ನು ಬಿಡಿ.

5. ಎಡ ತುದಿಯನ್ನು ಬಂದ್ ಮಾಡಿ ಬಲ ತುದಿಯಿಂದ ಎರೆಹುಳುವನ್ನು ಬಿಡಿ.
  (ಈ ಪ್ರಯೋಗವನ್ನು ಬಿಸಿಲಿನಲ್ಲಿ ಹಾಗೂ ಬೆಳಕಿನಲ್ಲಿ ಮಾಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.