ADVERTISEMENT

ಕೊನೆಗೆ ನಂದುವ ದೀಪ ಯಾವುದು?

ಮಾಡಿ ನಲಿ ಸರಣಿ -88

ಪ್ರೊ ಸಿ ಡಿ ಪಾಟೀಲ್
Published 16 ನವೆಂಬರ್ 2014, 19:30 IST
Last Updated 16 ನವೆಂಬರ್ 2014, 19:30 IST

ಬೇಕಾಗುವ ಸಲಕರಣೆ: ಸಾಮಗ್ರಿ: ಒಂದೇ ಗಾತ್ರದ ಮೂರು ಗಾಜಿನ ಗ್ಲಾಸುಗಳು, ಒಂದೇ ಅಳತೆಯ ಮೂರು ಮೋಂಬತ್ತಿಗಳು, ಬೆಂಕಿ ಪೆಟ್ಟಿಗೆ, ನುಣುಪು ಮೇಲ್ಮೈಯುಳ್ಳ ಟೇಬಲ್.

ವಿಧಾನ: 1) ಚಿತ್ರದಲ್ಲಿ ತೋರಿಸಿದಂತೆ ಒಂದೇ ಅಳತೆಯ ಒಂದು, ಎರಡು ಹಾಗೂ ಮೂರು ಮೋಂಬತ್ತಿಗಳನ್ನು ಹಚ್ಚಿ ಟೇಬಲ್ ಮೇಲೆ ಇಡಿ. ಅವುಗಳಿಗೆ ಅ, ಬ, ಕ ಎಂದು ಹೆಸರಿಸಿರಿ.

2) ಒಂದೇ ವೇಳೆಗೆ ಚಿತ್ರದಲ್ಲಿ ತೋರಿಸಿದಂತೆ, ಒಂದೇ ಗಾತ್ರಗಳ ಗಾಜಿನ ಗ್ಲಾಸುಗಳನ್ನು, ಮೋಂಬತ್ತಿಗಳ ಮೇಲೆ ನಿಮ್ಮ ಸ್ನೇಹಿತರ ಸಹಾಯದಿಂದ ಬೋರಲು ಹಾಕಿರಿ.

ಪ್ರಶ್ನೆ: 1) ಯಾವ ಮೋಂಬತ್ತಿಗಳು ಮೊದಲು ಹಾಗೂ ಯಾವ ಮೋಂಬತ್ತಿ ಕೊನೆಗೆ ನಂದುತ್ತವೆ? ಯಾಕೆ?
ಉತ್ತರ: 1) ‘ಕ’ ಗ್ಲಾಸಿನ ಕೆಳಗಿರುವ ಮೋಂಬತ್ತಿಗಳು ಮೊದಲು ಹಾಗೂ ‘ಅ’ ಗ್ಲಾಸಿನ ಕೆಳಗಿರುವ ಮೋಂಬತ್ತಿ ಕೊನೆಗೆ ನಂದುತ್ತವೆ. ಮೋಂಬತ್ತಿ ಉರಿಯಲು ಆಕ್ಸಿಜನ್ ಅನಿಲದ ಅವಶ್ಯಕತೆ ಇದೆ.

ಎಲ್ಲ ಗ್ಲಾಸುಗಳು ಒಂದೇ ಗಾತ್ರದವು ಇರುವುದರಿಂದ ಅವುಗಳಲ್ಲಿಯ ಆಕ್ಸಿಜನ್ ಸಮ ಪ್ರಮಾಣದಲ್ಲಿರುತ್ತದೆ.  ‌ಮೂರು ಮೋಂಬತ್ತಿಗಳು ಉರಿಯಲಿಕ್ಕೆ ಹೆಚ್ಚು ಆಕ್ಸಿಜನ್ ಅನಿಲ ಬೇಕಲ್ಲವೇ? ಹಾಗಾಗಿ ‘ಕ’ ದಲ್ಲಿ ಹೆಚ್ಚು ಆಕ್ಸಿಜನ್ ಬಳಕೆಯಾಗಿ, ಮೋಂಬತ್ತಿಗಳು ಮೊದಲು ನಂದುತ್ತವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT