ADVERTISEMENT

ಕ್ಯಾಂಪಸ್

​ಪ್ರಜಾವಾಣಿ ವಾರ್ತೆ
Published 3 ಜೂನ್ 2012, 19:30 IST
Last Updated 3 ಜೂನ್ 2012, 19:30 IST

ಐಐಎಚ್‌ಎಸ್‌ಗೆ ಭಾವೆ

ರಾಷ್ಟ್ರೀಯ ಮಟ್ಟದ ಉದ್ದೇಶಿತ ವಿಶ್ವವಿದ್ಯಾಲಯ `ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟ್ಲ್‌ಮೆಂಟ್ಸ್~ (ಐಐಎಚ್‌ಎಸ್) ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸೆಬಿ (ಷೇರು ಮತ್ತು ವಿನಿಮಯ ಮಂಡಳಿ) ಮಾಜಿ ಮುಖ್ಯಸ್ಥ ಸಿ.ಬಿ. ಭಾವೆ ನೇಮಕಗೊಂಡಿದ್ದಾರೆ.

ಸಂಸ್ಥೆಯ ಆಡಳಿತ ಮಂಡಲಿ ಮತ್ತು ಪ್ರಾಯೋಜಕರ ಸಮೂಹದಲ್ಲಿ ದೀಪಕ್ ಪರೇಕ್, ಜಮ್ಷೆಡ್ ಗೋದ್ರೇಜ್, ನಂದನ್ ನೀಲೇಕಣಿ, ರಾಹುಲ್ ಮೆಹ್ರೋತ್ರಾ, ರಾಕೇಶ್ ಮೋಹನ್, ಶಿರಿಶ್ ಪಟೇಲ್, ವಿಜಯ್ ಕೇಳ್ಕರ್ ಮುಂತಾದವರಿದ್ದಾರೆ.

ಅಂತರ್ ಶಿಸ್ತೀಯ ಶಿಕ್ಷಣ, ಹೊಸ ಆವಿಷ್ಕಾರ, ಸಂಶೋಧನೆ, ನಗರೀಕರಣ ಮತ್ತು ಅಭಿವೃದ್ಧಿ ಆಧಾರಿತ ಬದಲಾವಣೆಯ ಅಧ್ಯಯನ ಈ ಸಂಸ್ಥೆಯ ಮುಖ್ಯ ಉದ್ದೇಶ. ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಲಾದ ಸಂಶೋಧನೆ ಮತ್ತು ನವೀಕರಣ ವಿಶ್ವವಿದ್ಯಾಲಯಗಳ ಮಸೂದೆ ಐಐಎಚ್‌ಎಸ್‌ನಂಥ ಸಂಸ್ಥೆಗಳ ಸ್ಥಾಪನೆಗೆ ಅವಕಾಶ ನೀಡುತ್ತದೆ. ಇದರ ಮೊದಲ ಕ್ಯಾಂಪಸ್ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT