ADVERTISEMENT

ಕ್ರೀಡಾ ಕ್ವಿಜ್‌...

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2017, 19:30 IST
Last Updated 5 ಮಾರ್ಚ್ 2017, 19:30 IST
ಕ್ರೀಡಾ ಕ್ವಿಜ್‌...
ಕ್ರೀಡಾ ಕ್ವಿಜ್‌...   

2020ರ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡ ಎತ್ತರದ ಸಾಧನೆ ಮಾಡಬೇಕೆಂದು ಸರ್ಕಾರ ಈಗಾಗಲೇ ವಿದೇಶಿ ಕೋಚ್ ನೇಮಕ ಮಾಡಿದೆ. ಇತ್ತೀಚಿನ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ನೀಡಿರುವ ವನಿತೆಯರು ಮತ್ತಷ್ಟು ಸಾಧನೆ ಮಾಡುವ ಭರವಸೆ ಮೂಡಿಸಿದ್ದಾರೆ. ಮಹಿಳಾ ಹಾಕಿಗೆ ಸಂಬಂಧಿಸಿದ ಪ್ರಶ್ನೋತ್ತರಗಳು ಇಲ್ಲಿವೆ.

1) ಭಾರತ ಮಹಿಳಾ ಹಾಕಿ ತಂಡಕ್ಕೆ ಇರುವ ನೆಚ್ಚಿನ ಹೆಸರೇನು?
2) 1974ರ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಎಷ್ಟನೇ ಸ್ಥಾನ ಪಡೆದಿತ್ತು?
3) ಭಾರತದ ವನಿತೆಯರು ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದು ಯಾವಾಗ?
4) 2002ರ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಭಾರತ ತಂಡವನ್ನು ಮುನ್ನಡೆಸಿದ್ದವರು ಯಾರು?
5) ಭಾರತ  ತಂಡ ಒಲಿಂಪಿಕ್ಸ್‌ನಲ್ಲಿ ಇದುವರೆಗೂ ಎಷ್ಟು ಸಲ ಪಾಲ್ಗೊಂಡಿದೆ?
6) ಭಾರತದ ಆಟಗಾರ್ತಿಯಾಗಿದ್ದ ಹೆಲೆನ್‌ ಮೇರಿ ಎಲ್ಲಿ ನೌಕರಿಯಲ್ಲಿದ್ದಾರೆ?
7) 2013ರ ಜೂನಿಯರ್ ವಿಶ್ವಕಪ್‌ನಲ್ಲಿ ಭಾರತ ಕಂಚಿನ ಸಾಧನೆ ಮಾಡಿತ್ತು. ಆಗ ತಂಡದಲ್ಲಿದ್ದ ಕರ್ನಾಟಕದ ಆಟಗಾರ್ತಿ ಯಾರು?
8) 2014ರ ಇಂಚೆನ್‌ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಕಂಚು ಗೆದ್ದಾಗ ತಂಡದ ನಾಯಕಿಯಾಗಿದ್ದವರು ಯಾರು?
9) ಭಾರತ ತಂಡದ ಈಗಿನ ನಾಯಕಿ ಯಾರು?
10) ವಿಶ್ವ  ರ್‍ಯಾಂಕಿಂಗ್‌ನಲ್ಲಿ ಸದ್ಯಕ್ಕೆ ಭಾರತ ಹೊಂದಿರುವ ಸ್ಥಾನವೆಷ್ಟು?

ಉತ್ತರಗಳು
1) ಗೋಲ್ಡನ್‌ ಗರ್ಲ್ಸ್‌ ಆಫ್‌ ಹಾಕಿ 2)  ನಾಲ್ಕು 3) 1980ರ ಮಾಸ್ಕೊ ಒಲಿಂಪಿಕ್ಸ್‌ 4) ಸೂರಜ್‌ ಲತಾ ದೇವಿ 5) ಎರಡು ಬಾರಿ 6) ಇಂಡಿಯನ್‌ ರೈಲ್ವೇ 7) ಎಂ. ಎನ್. ಪೊನ್ನಮ್ಮ 8) ರಿತು ರಾಣಿ 9) ಸುಶೀಲಾ ಚಾನು 10) 12.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.