ADVERTISEMENT

ನೀವೂ ತುಂತುರಕ ತಯಾರಿಸಿರಿ

ಮಾಡಿ ನಲಿ ಸರಣಿ –70

ಪ್ರೊ ಸಿ ಡಿ ಪಾಟೀಲ್
Published 6 ಜುಲೈ 2014, 12:43 IST
Last Updated 6 ಜುಲೈ 2014, 12:43 IST

ಬೇಕಾಗುವ ಸಲಕರಣೆಗಳು: ಪೇಯ ಕುಡಿಯುವ ಊದುಕೊಳವೆ, ಬ್ಲೇಡ್, ಬೀಕರ್, ನೀರು.

ವಿಧಾನ: ಪೇಯ ಕುಡಿಯುವ ಒಂದು ಊದುಗೊಳವೆಯನ್ನು (ಸ್ಟ್ರಾ) ತೆಗೆದುಕೊಳ್ಳಿರಿ. ಎರಡು ತುದಿಗೆ ಅ ಮತ್ತು ಬ ಎಂದು ಹೆಸರಿಸಿರಿ.  ಒಂದು ಹೀರುಗೊಳವೆಯ (ಸ್ಟ್ರಾ) ಮಧ್ಯದಲ್ಲಿ ಅರ್ಧದಷ್ಟು ಭಾಗವನ್ನು ಕತ್ತರಿಸಿರಿ. ಚಿತ್ರದಲ್ಲಿ ತೋರಿಸಿದಂತೆ ಬ ತುದಿಯನ್ನು ನೀರಿರುವ ಬೀಕರ್‌ನಲ್ಲಿಟ್ಟು ಅ ತುದಿಯಿಂದ ಊದಿರಿ.

ಪ್ರಶ್ನೆ: ಹೀರುಗೊಳವೆಯ (ಸ್ಟ್ರಾ) ಅ ಬದಿಯಿಂದ ಊದಿದಾಗ ಏನಾಗುತ್ತದೆ, ಯಾಕೆ?

ADVERTISEMENT

ಉತ್ತರ: ಹೀರುಗೊಳವೆ (ಸ್ಟ್ರಾ)ಯ  ಅ ತುದಿಯಿಂದ ಊದಿದಾಗ ಗಾಳಿ ಕ ದಿಂದ ಹೊರಹೋಗುತ್ತದೆ. ಈ ಚಲಿಸುವ ಗಾಳಿಯ ಒತ್ತಡ ಕಡಿಮೆ ಇರುತ್ತದೆ. ಇದು ಬರ್ನಾಲಿ ತತ್ವ. ಆದರೆ ಬೀಕರಿನಲ್ಲಿರುವ ನೀರಿನ ಮೇಲೆ ಬೀಳುವ ಒತ್ತಡ ಹೆಚ್ಚು. ಇದರಿಂದ ಒತ್ತಡದಲ್ಲಿ ವ್ಯತ್ಯಾಸವಾಗುತ್ತದೆ. ಹೀಗಾಗಿ ಬಕ ದಲ್ಲಿ ನೀರು ಮೇಲೆ ಏರಿ ತುಂತುರಿಸುತ್ತದೆ. ಔಷಧಿ ತುಂತುರಕಗಳು, ಹೀಗೆಯೇ ಕೆಲಸ ಮಾಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.