ADVERTISEMENT

ನೋಟ-ನೀರಿನ ಸಂಬಂಧ ಏನು?

ಮಾಡಿ ನಲಿ ಸರಣಿ - 3

ಪ್ರೊ.ಸಿ ಡಿ ಪಾಟೀಲ್
Published 10 ಫೆಬ್ರುವರಿ 2013, 19:59 IST
Last Updated 10 ಫೆಬ್ರುವರಿ 2013, 19:59 IST
ನೋಟ-ನೀರಿನ ಸಂಬಂಧ ಏನು?
ನೋಟ-ನೀರಿನ ಸಂಬಂಧ ಏನು?   

ಸಾಮಗ್ರಿಗಳು: ಚೀನಿ ಮಣ್ಣಿನ ಬಟ್ಟಲು, ನಾಣ್ಯ, ನೀರು.
ವಿಧಾನ :

1. ಚಿತ್ರದಲ್ಲಿ ತೋರಿಸಿದಂತೆ ಒಂದು ಚೀನಿ ಮಣ್ಣಿನ ಪಾತ್ರೆಯನ್ನು ತೆಗೆದುಕೊಳ್ಳಿ.
2. ಪಾತ್ರೆಯ ಮಧ್ಯದಲ್ಲಿ ಒಂದು ನಾಣ್ಯವನ್ನು ಇಟ್ಟು ಅದು ನಿಮ್ಮ ದೃಷ್ಟಿಗೆ ಗೋಚರಿಸದಂತೆ ಕಣ್ಣುಗಳನ್ನು ಹೊಂದಿಸಿಕೊಳ್ಳಿ.
3. ನಿಮ್ಮ ದೃಷ್ಟಿಯನ್ನು ಬದಲಿಸದೆ ನಿಮ್ಮ ಸ್ನೇಹಿತನಿಗೆ ಪಾತ್ರೆಯಲ್ಲಿ ನೀರು ಹಾಕಲು ಹೇಳಿ.

ಪ್ರಶ್ನೆ:
1. ಮೊದಲಿನ ಪಾತ್ರೆಯಲ್ಲಿನ ನಾಣ್ಯ ನಿಮಗೆ ಕಾಣಿಸದೇ ಇರುವುದಕ್ಕೆ ಕಾರಣ ಏನು?
2. ಆ ಪಾತ್ರೆಯಲ್ಲಿ ನೀರನ್ನು ಹಾಕುತ್ತಾ ಹೋದಾಗ ಏನಾಗುತ್ತದೆ? ಯಾಕೆ?

ಉತ್ತರ:
1. ನಮಗೆ ಯಾವುದೇ ಒಂದು ವಸ್ತು ಕಾಣಬೇಕಾದರೆ ಅದರ ಮೇಲೆ ಬಿದ್ದ ಬೆಳಕು ನಮ್ಮ ಕಣ್ಣನ್ನು ಸೇರಬೇಕು. ಇಲ್ಲಿ ಪಾತ್ರೆಯ ಅಂಚು (Rim)ನಾಣ್ಯದಿಂದ ಬರುವ ಬೆಳಕನ್ನು ತಡೆದು ನಮಗೆ ನಾಣ್ಯ ಕಾಣಿಸದಂತೆ ಮಾಡಿತು.
2. ಬೆಳಕಿನ ಕಿರಣಗಳು ಒಂದು ಮಾಧ್ಯಮದಿಂದ ಮತ್ತೊಂದು ಮಾಧ್ಯಮಕ್ಕೆ ಚಲಿಸುವಾಗ ಬಾಗುತ್ತವೆ. ಹೀಗೆ ಕಿರಣಗಳು ಬಾಗುವುದಕ್ಕೆ ವಕ್ರೀಕರಣ (Refraction)ಎನ್ನುತ್ತಾರೆ. ಪಾತ್ರೆಯಲ್ಲಿ ನೀರನ್ನು ಹಾಕುತ್ತಾ ಹೋದಾಗ ಬೆಳಕಿನ ಕಿರಣಗಳು ಹೆಚ್ಚು ದಟ್ಟ (Denser) ಮಾಧ್ಯಮದಿಂದ ಕಡಿಮೆ ದಟ್ಟ (Rarer) ಮಾಧ್ಯಮದ ಕಡೆಗೆ ಚಲಿಸುತ್ತವೆ. ಅಂದರೆ ಅವು ನೀರಿನ ಪಾತಳಿಯ ಕಡೆ ಚಲಿಸುತ್ತವೆ. ಇದರಿಂದ ನಾಣ್ಯವು ಮೇಲೆದ್ದು ಬಂದಂತೆ ನಮಗೆ ಗೋಚರಿಸುತ್ತದೆ. ಅಂದರೆ ನೀರು, ನಮಗೆ ಕಾಣದ್ದನ್ನು ಕಾಣುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.