ADVERTISEMENT

ಭಾರತ ಕ್ರಿಕೆಟ್‌ಗೆ ಸಂಭ್ರಮ ತಂದ ಸಂವತ್ಸರ

ಜಿ.ಶಿವಕುಮಾರ
Published 24 ಡಿಸೆಂಬರ್ 2017, 19:30 IST
Last Updated 24 ಡಿಸೆಂಬರ್ 2017, 19:30 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ   

2017, ಭಾರತ ಕ್ರಿಕೆಟ್‌ಗೆ ಸ್ಮರಣೀಯ ವರ್ಷ. ಋತುವಿನ ಆರಂಭದಲ್ಲಿ ಮಹೇಂದ್ರ ಸಿಂಗ್‌ ದೋನಿ, ಏಕದಿನ ಮತ್ತು ಟಿ-20 ತಂಡಗಳ ನಾಯಕತ್ವ ತೊರೆದರು. ಬಿಸಿಸಿಐ, ವಿರಾಟ್‌ ಕೊಹ್ಲಿಗೆ ನಾಯಕನ ಪಟ್ಟ ಕಟ್ಟಿದ ನಂತರ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಶಕೆ ಶುರುವಾಯಿತು. ಕೊಹ್ಲಿ ಸಾರಥ್ಯದಲ್ಲಿ ತಂಡ ಹಲವು ಸರಣಿಗಳನ್ನು ಗೆದ್ದು ಹೊಸ ಭಾಷ್ಯ ಬರೆಯಿತು.

ವಿರಾಟ್‌, ಕ್ರಿಕೆಟ್‌ ಲೋಕದಲ್ಲಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದರು. ರವೀಂದ್ರ ಜಡೇಜ, ರವಿಚಂದ್ರನ್‌ ಅಶ್ವಿನ್‌, ಜಸ್‌ಪ್ರೀತ್‌ ಬೂಮ್ರಾ, ದೋನಿ ಮತ್ತು ರೋಹಿತ್ ಶರ್ಮಾ ಅವರೂ ವಿಶಿಷ್ಠ ದಾಖಲೆಗಳ ಸರದಾರರಾಗಿ ಮೆರೆದರು.

ಜನವರಿ 2:  ಲೋಧಾ ಶಿಫಾರಸುಗಳನ್ನು ಜಾರಿಗೊಳಿಸದ ಹಿನ್ನೆಲೆ, ಬಿಸಿಸಿಐ ಅಧ್ಯಕ್ಷ ಅನುರಾಗ್‌ ಠಾಕೂರ್‌ ಮತ್ತು ಕಾರ್ಯದರ್ಶಿ ಅಜಯ್‌ ಶಿರ್ಕೆ ಅವರನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು.
ಜನವರಿ 4:  ಭಾರತ ಏಕದಿನ ಮತ್ತು ಟಿ-20 ತಂಡಗಳಿಗೆ ಮಹೇಂದ್ರ ಸಿಂಗ್‌ ದೋನಿ ದಿಢೀರ್‌ ರಾಜೀನಾಮೆ.
ಜನವರಿ 6: ವಿರಾಟ್‌ ಕೊಹ್ಲಿಗೆ ಏಕದಿನ ಮತ್ತು ಟಿ-20 ನಾಯಕತ್ವ.
ಜನವರಿ 15: ವಿರಾಟ್‌ ನಾಯಕತ್ವದ ಚೊಚ್ಚಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಜಯ.
ಜನವರಿ 26: ಮೊದಲ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಭಾರತಕ್ಕೆ ಸೋಲು.
ಜನವರಿ 30: ಬಿಸಿಸಿಐ ಆಡಳಿತ ನೋಡಿಕೊಳ್ಳಲು ವಿನೋದ್‌ ರಾಯ್‌ ಸಾರಥ್ಯದಲ್ಲಿ ನಾಲ್ಕು ಸದಸ್ಯರ ಆಡಳಿತಾಧಿಕಾರಿಗಳ ಸಮಿತಿ ರಚಿಸಿದ ಸುಪ್ರೀಂಕೋರ್ಟ್‌ 
ಫೆಬ್ರುವರಿ 1: 2-1ರಿಂದ ಇಂಗ್ಲೆಂಡ್‌ ಎದುರಿನ ಟಿ-20 ಸರಣಿ ಗೆದ್ದ ಭಾರತ
ಫೆಬ್ರುವರಿ 13: ಬಾಂಗ್ಲಾದೇಶ ಎದುರಿನ ಏಕೈಕ ಪಂದ್ಯದ ಟೆಸ್ಟ್‌ ಸರಣಿ ಜಯಿಸಿದ ಭಾರತ.
ಫೆಬ್ರುವರಿ 20: ಐಪಿಎಲ್‌ ಆಟಗಾರರ ಹರಾಜು,ಇಂಗ್ಲೆಂಡ್‌ನ ಬೆನ್‌ ಸ್ಟೋಕ್‌್, ಟೈಮಲ್‌ ಮಿಲ್ಸ್‌ಗೆ ಗರಿಷ್ಠ ಬೆಲೆ.
ಫೆಬ್ರುವರಿ 25: ಬಾರ್ಡರ್‌ -ಗಾವಸ್ಕರ್‌ ಸರಣಿಯ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಮಣಿದ ಭಾರತ.
ಫೆಬ್ರುವರಿ 27: ಹಿರಿಯ ಕ್ರಿಕೆಟಿಗರಾದ ರಾಜೀಂದರ್‌ ಗೋಯಲ್‌,ಪದ್ಮಾಲ್ಕರ್ ಶಿವಾಲ್ಕರ್‌ ಮತ್ತು ಕರ್ನಾಟಕದ ಶಾಂತಾ ರಂಗಸ್ವಾಮಿ ಅವರನ್ನು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಿದ ಬಿಸಿಸಿಐ.
ಮಾರ್ಚ್ 6: ಟೆಸ್ಟ್‌ನಲ್ಲಿ ಅತಿವೇಗವಾಗಿ 1,000 ರನ್‌ ಗಳಿಸಿದ ಕೆ.ಎಲ್.ರಾಹುಲ್.
ಮಾರ್ಚ್‌ 7: ಭಾರತ ಕ್ರಿಕೆಟ್‌ ತಂಡಕ್ಕೆ ಒಪ್ಪೊ ಮೊಬೈಲ್ಸ್‌ ಪ್ರಾಯೋಜಕತ್ವ.
ಮಾರ್ಚ್ 8: ಐಸಿಸಿ ಟೆಸ್ಟ್‌ ಬೌಲರ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ರವಿಚಂದ್ರನ್‌ ಅಶ್ವಿನ್‌ ಮತ್ತು ರವೀಂದ್ರ ಜಡೇಜ ಜಂಟಿಯಾಗಿ ಅಗ್ರಸ್ಥಾನಕ್ಕೇರಿದ್ದು.
ಮಾರ್ಚ್‌ 19: ಲೋಧ ಸಮಿತಿ ಶಿಫಾರಸು: ಎಂಸಿಎ ಮತದಾನದ ಹಕ್ಕು ಮೊಟಕು, ಈಶಾನ್ಯ ರಾಜ್ಯಗಳಿಗೆ ಬಿಸಿಸಿಐ ಮಾನ್ಯತೆ.
ಮಾರ್ಚ್‌ 21: ಐಸಿಸಿ ಟೆಸ್ಟ್‌ ಬೌಲರ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ರವೀಂದ್ರ ಜಡೇಜಗೆ ಅಗ್ರಸ್ಥಾನ.
ಮಾರ್ಚ್‌ 22: ಕೇಂದ್ರಿಯ ಗುತ್ತಿಗೆ ಪಟ್ಟಿ ಪ್ರಕಟಿಸಿದ ಬಿಸಿಸಿಐ. ಹೊಸ ನಿಯಮದಂತೆ ಆಟಗಾರರ ಸಂಭಾವನೆ ದುಪ್ಪಟ್ಟು.
ಮಾರ್ಚ್‌ 28: 2-1ರಿಂದ ಬಾರ್ಡರ್‌-ಗಾವಸ್ಕರ್‌ ಟೆಸ್ಟ್‌ ಸರಣಿ ಗೆದ್ದ ಭಾರತ.

ADVERTISEMENT

*ಅಶ್ವಿನ್‌ಗೆ ಐಸಿಸಿ ವರ್ಷದ ಕ್ರಿಕೆಟಿಗ ಮತ್ತು ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿ.

ಮಾರ್ಚ್‌ 30: ವಿರಾಟ್‌ ಕೊಹ್ಲಿಗೆ ಪದ್ಮಶ್ರೀ ಪ್ರಶಸ್ತಿ.
ಏಪ್ರಿಲ್‌ 8: ಐಪಿಎಲ್‌ 10ನೇ ಆವೃತ್ತಿಗೆ ಚಾಲನೆ.
ಏಪ್ರಿಲ್‌ 12: ಚಾಂಪಿಯನ್ಸ್‌ ಟ್ರೋಫಿಗೆ ಹರಭಜನ್‌ ಸಿಂಗ್‌ ರಾಯಭಾರಿ.
ಏಪ್ರಿಲ್‌ 18: ಎಸ್‌.ಶ್ರೀಶಾಂತ್‌ ಮೇಲಿನ ಆಜೀವ ನಿಷೇಧ ಶಿಕ್ಷೆ ತೆರವುಗೊಳಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟನೆ.
ಮೇ 9:  ಚಾಂಪಿಯನ್ಸ್‌ ಟ್ರೋಫಿಗೆ ಪ್ರಕಟಿಸಿದ ಭಾರತ ತಂಡದಲ್ಲಿ ಕರ್ನಾಟಕದ ಮನೀಷ್‌ ಪಾಂಡೆಗೆ ಸ್ಥಾನ.
ಮೇ 19: ಎನ್‌ಸಿಎಗೆ ಬೇಕಾದ 25 ಎಕರೆ ಜಮೀನನ್ನು ಬಿಸಿಸಿಐಗೆ ಮಂಜೂರು ಮಾಡಿದ ಕರ್ನಾಟಕ ಸರ್ಕಾರ.
ಮೇ 21: ಮುಂಬೈ ಇಂಡಿಯನ್ಸ್‌ಗೆ ಐಪಿಎಲ್‌ ಕಿರೀಟ.
ಮೇ 25: ಕೋಚ್‌ ಹುದ್ದೆಗೆ ಬಿಸಿಸಿಐನಿಂದ ಅರ್ಜಿ ಆಹ್ವಾನ.
ಜೂನ್‌ 1: ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಗೆ ರಾಮಚಂದ್ರ ಗುಹಾ ರಾಜೀನಾಮೆ.

*ಭಾರತ ತಂಡದ ಕೋಚ್‌ ಹುದ್ದೆಗೆ ವೀರೇಂದ್ರ ಸೆಹ್ವಾಗ್‌ ಅರ್ಜಿ.

ಜೂನ್‌ 16 : ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 300ನೇ ಪಂದ್ಯ ಆಡಿದ ಯುವರಾಜ್‌ ಸಿಂಗ್‌.
ಜೂನ್‌ 18: ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನದ ಎದುರು ಭಾರತಕ್ಕೆ ಸೋಲು.
ಜೂನ್‌ 20: ಕೋಚ್‌ ಹುದ್ದೆಗೆ ಅನಿಲ್‌ ಕುಂಬ್ಳೆ ರಾಜೀನಾಮೆ.
ಜೂನ್‌ 27: ಲೊಧಾ ಸಮಿತಿ ಶಿಫಾರಸುಗಳನ್ನು ಶೀಘ್ರವಾಗಿ ಜಾರಿಗೆ ತರಲು ರಾಜೀವ್‌ ಶುಕ್ಲಾ ನೇತೃತ್ವದಲ್ಲಿ ಏಳು ಜನರ ವಿಶೇಷ ಸಮಿತಿ ರಚಿಸಿದ ಬಿಸಿಸಿಐ.
ಜೂನ್‌ 30: ಭಾರತ ‘ಎ’ ತಂಡದ ಮುಖ್ಯ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಮುಂದುವರಿಕೆ.
ಜುಲೈ 1: ದೋನಿ, ಏಕದಿನ ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ ಸಿಡಿಸಿದ ಭಾರತದ ಮೊದಲ ಆಟಗಾರ ಎಂಬ ದಾಖಲೆ.
ಜುಲೈ 3: ಕೋಚ್‌ ಹುದ್ದೆಗೆ ರವಿಶಾಸ್ತ್ರಿ ಅರ್ಜಿ.
ಜುಲೈ 7: ವಿಂಡೀಸ್‌ ವಿರುದ್ಧದ ಏಕದಿನ ಸರಣಿಯನ್ನು 3-1ರಿಂದ ಗೆದ್ದ ಭಾರತ.
ಜುಲೈ 10: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ನೇಮಕಕ್ಕಾಗಿ ಬಿಸಿಸಿಐ ಸಲಹಾ ಸಮಿತಿಯಿಂದ ಐದು ಮಂದಿಯ ಸಂದರ್ಶನ

* ವೆಸ್ಟ್‌ ಇಂಡೀಸ್‌ ಎದುರಿನ ಏಕೈಕ ಟಿ-20 ಪಂದ್ಯದಲ್ಲಿ ಭಾರತಕ್ಕೆ 9 ವಿಕೆಟ್‌ ಸೋಲು.

ಜುಲೈ 11: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ರವಿಶಾಸ್ತ್ರಿ ನೇಮಕ.
ಜುಲೈ 14: ಬ್ಯಾಟಿಂಗ್‌ ಸಲಹೆಗಾರ ರಾಹುಲ್‌ ದ್ರಾವಿಡ್‌ ಮತ್ತು ಬೌಲಿಂಗ್‌ ಸಲಹೆಗಾರ ಜಹೀರ್‌ ಖಾನ್‌ ಅವರ ನೇಮಕ ತಡೆಹಿಡಿದ ಸಿಒಎ.

* ಐಪಿಎಲ್‌ನಲ್ಲಿ ಆಡುವ ಚೆನ್ನೈ ಸೂಪರ್‌ ಸಿಂಗ್ಸ್‌ ಮತ್ತು ರಾಜಸ್ಥಾನ ರಾಯಲ್ಸ್‌ ತಂಡಗಳ ಮೇಲಿನ ಎರಡು ವರ್ಷಗಳ ಅಮಾನತು ಶಿಕ್ಷೆ ಪೂರ್ಣ.

ಜುಲೈ 15 : ಕೋಚ್‌ ಹುದ್ದೆಗೆ ರವಿಶಾಸ್ತ್ರಿ ನೇಮಕಕ್ಕೆ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಅನುಮೋದನೆ.
ಜುಲೈ 16: ಭಾರತ ತಂಡದ ಬೌಲಿಂಗ್‌ ಕೋಚ್ ಆಗಿ ಭರತ್‌ ಅರುಣ್‌ ನೇಮಕ. ಸಹಾಯಕ ಕೋಚ್‌ ಆಗಿ ಸಂಜಯ್ ಬಂಗಾರ್‌, ಫೀಲ್ಡಿಂಗ್‌ ಕೋಚ್‌ ಆಗಿ ಆರ್‌.ಶ್ರೀಧರ್‌ ಮುಂದುವರಿಕೆ.

*ಮುಖ್ಯ ಕೋಚ್‌ ರವಿಶಾಸ್ತ್ರಿಗೆ ₹ 8 ಕೋಟಿ ಸಂಭಾವನೆ ನೀಡಲು ಬಿಸಿಸಿಐ ನಿರ್ಧಾರ.

ಜುಲೈ 26: ಲೋಧಾ ಸಮಿತಿ ಶಿಫಾರಸುಗಳನ್ನು ಭಾಗಶಃ ಜಾರಿಗೆ ತರಲು ಬಿಸಿಸಿಐ ಸಮ್ಮತಿ.
ಜುಲೈ 27: ಖೇಲ್‌ ರತ್ನ ಮತ್ತು ಅರ್ಜುನ ಪ್ರಶಸ್ತಿ ಸಮಿತಿಗೆ ವೀರೇಂದ್ರ ಸೆಹ್ವಾಗ್‌ ನೇಮಕ.
ಜುಲೈ 29: ಗಾಲ್‌ನಲ್ಲಿ ನಡೆದ ಶ್ರೀಲಂಕಾ ಎದುರಿನ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ 304ರನ್‌ ಜಯ.
ಆಗಸ್ಟ್‌ 3: ಟೆಸ್ಟ್‌ನಲ್ಲಿ ಚೇತೇಶ್ವರ ಪೂಜಾರ 4,000 ರನ್‌ ಸಾಧನೆ .
ಆಗಸ್ಟ್‌ 4: ಟೆಸ್ಟ್‌ನಲ್ಲಿ ಅತಿ ವೇಗವಾಗಿ 2,000 ರನ್‌ ಮತ್ತು 250 ವಿಕೆಟ್‌ ಗಳಿಸಿದ ಆರ್‌.ಅಶ್ವಿನ್‌. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ.
ಆಗಸ್ಟ್‌ 5: ಟೆಸ್ಟ್‌ನಲ್ಲಿ ಅತಿ ವೇಗವಾಗಿ 150 ವಿಕೆಟ್‌ ಪಡೆದ ರವೀಂದ್ರ ಜಡೇಜ, ಈ ಸಾಧನೆ ಮಾಡಿದ ಮೊದಲ ಎಡಗೈ ಬೌಲರ್‌ ಎಂಬ ವಿಶ್ವ ದಾಖಲೆ.
ಆಗಸ್ಟ್‌ 7: ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ಎಸ್‌.ಶ್ರೀಶಾಂತ್‌ ಮೇಲಿನ ಆಜೀವ ನಿಷೇಧ ತೆರವುಗೊಳಿಸುವಂತೆ ಬಿಸಿಸಿಐಗೆ ಕೇರಳ ಹೈಕೋರ್ಟ್‌ ಆದೇಶ.
ಆಗಸ್ಟ್‌ 8: ಐಸಿಸಿ ಟೆಸ್ಟ್‌ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ರವೀಂದ್ರ ಜಡೇಜ.
ಆಗಸ್ಟ್‌ 12: ಟೆಸ್ಟ್‌ ಕ್ರಿಕೆಟ್‌ನಲ್ಲಿ ಸತತ ಏಳು ಅರ್ಧಶತಕ ಗಳಿಸಿದ ಭಾರತದ ಮೊದಲ ಆಟಗಾರ ಎಂಬ ದಾಖಲೆ ಬರೆದ ಕೆ.ಎಲ್‌.ರಾಹುಲ್‌.
ಆಗಸ್ಟ್‌ 15: ಐಸಿಸಿ ಟೆಸ್ಟ್‌ ಕ್ರಮಾಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದ ರಾಹುಲ್‌.
ಆಗಸ್ಟ್ 22: ಅರ್ಜುನ ಪ್ರಶಸ್ತಿಗೆ ಚೇತೇಶ್ವರ ಪೂಜಾರ ಆಯ್ಕೆ.
ಆಗಸ್ಟ್ 27: ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಗೆದ್ದ ಭಾರತ .
ಆಗಸ್ಟ್‌ 30: 300ನೇ ಏಕದಿನ ಪಂದ್ಯ ಆಡಿದ ದೋನಿ.

*ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಬಾರಿ ನಾಟೌಟ್‌ ಆದ (73) ಬ್ಯಾಟ್ಸ್‌ಮನ್‌ ಎಂಬ ವಿಶ್ವ ದಾಖಲೆ ಬರೆದ ದೋನಿ.
*ಶಾರ್ದೂಲ್ ಠಾಕೂರ್ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ.

ಸೆಪ್ಟೆಂಬರ್‌ 3: ಶ್ರೀಲಂಕಾ ನೆಲದಲ್ಲಿ 5-0ರಿಂದ ಏಕದಿನ ಸರಣಿ ‘ಕ್ಲೀನ್‌ ಸ್ವೀನ್’ ಮಾಡಿದ ಭಾರತ.
ಸೆಪ್ಟೆಂಬರ್‌ 4: ₹ 16,347 ಕೋಟಿಗೆ ಐಪಿಎಲ್‌ ಜಾಗತಿಕ ಮಾಧ್ಯಮ ಹಕ್ಕು ಖರೀದಿಸಿದ ಸ್ಟಾರ್‌ ಇಂಡಿಯಾ.
ಸೆಪ್ಟೆಂಬರ್‌ 6: ಲಂಕಾ ಎದುರಿನ ಏಕೈಕ ಟಿ-20ಯಲ್ಲಿ ಭಾರತಕ್ಕೆ ಜಯ.
ಸೆಪ್ಟೆಂಬರ್‌ 17: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಅರ್ಧಶತಕ ಗಳಿಸಿದ ಸಾಧನೆ ಮಾಡಿದ ದೋನಿ.

*ಐಸಿಸಿ ಟಿ-20 ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಜಸ್‌ಪ್ರೀತ್‌ ಬೂಮ್ರಾಗೆ ಎರಡನೇ ಸ್ಥಾನ.

ಸೆಪ್ಟೆಂಬರ್‌ 20: ದೋನಿ ಹೆಸರನ್ನು ಪದ್ಮಭೂಷಣ ಗೌರವಕ್ಕೆ ಶಿಫಾರಸು ಮಾಡಿದ ಬಿಸಿಸಿಐ.
ಸೆಪ್ಟೆಂಬರ್‌ 21: ಆಸ್ಟ್ರೇಲಿಯಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಕುಲದೀಪ್‌ ಯಾದವ್‌ ಹ್ಯಾಟ್ರಿಕ್‌ ಸಾಧನೆ. ಈ ಸಾಧನೆ ಮಾಡಿದ ಭಾರತದ ಮೂರನೇ ಬೌಲರ್‌.
ಸೆಪ್ಟೆಂಬರ್‌ 24: ಇಂದೋರ್‌ನಲ್ಲಿ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಗೆದ್ದ ಭಾರತ ತಂಡ ಐಸಿಸಿ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು.
ಅಕ್ಟೋಬರ್‌ 1: ನಾಗಪುರದಲ್ಲಿ ನಡೆದ ಐದನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ಭಾರತ 4-1ರಿಂದ ಸರಣಿ ಕೈವಶ ಮಾಡಿಕೊಂಡಿತು.
ಅಕ್ಟೋಬರ್ 13: ಭಾರತ -ಆಸ್ಟ್ರೇಲಿಯಾ ನಡುವಣ ಮೂರನೇ ಟಿ-20 ಪಂದ್ಯ ಮಳೆಗೆ ಆಹುತಿ. ಸರಣಿ 1-1ರಲ್ಲಿ ಸಮಬಲ.
ಅಕ್ಟೋಬರ್‌ 25: ಬುಕ್ಕಿಗೆ ಅನುಕೂಲವಾಗುವಂತೆ ಪಿಚ್‌ ಸಿದ್ಧಗೊಳಿಸಿದ್ದಾಗಿ ಒಪ್ಪಿಕೊಂಡಿದ್ದ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದ ಮುಖ್ಯ ಕ್ಯುರೇಟರ್‌ ಪಾಂಡುರಂಗ ಸಲಗಾಂವ್ಕರ್‌ ಅವರನ್ನು ಬಿಸಿಸಿಐ ಅಮಾನತು ಮಾಡಿತ್ತು.
ಅಕ್ಟೋಬರ್‌ 29: ನ್ಯೂಜಿಲೆಂಡ್‌ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಗೆದ್ದ ಭಾರತ. 2-1ರಿಂದ ಸರಣಿ ತನ್ನದಾಗಿಸಿಕೊಂಡಿತ್ತು.
ಅಕ್ಟೋಬರ್‌ 30: ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಕೊಹ್ಲಿ.
ಅಕ್ಟೋಬರ್‌ 31: ಕ್ರಿಕೆಟ್‌ ಆಟಗಾರರ ಸಂಭಾವನೆ ಹೆಚ್ಚಳ ಮಾಡುವ ಬೇಡಿಕೆಗೆ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ ಸಮ್ಮತಿ.
*ಐಸಿಸಿ ಟಿ-20 ಬ್ಯಾಟ್ಸ್‌ಮನ್‌ಗಳ ಕ್ರಮಾಂಕ ಪಟ್ಟಿಯಲ್ಲಿ ಕೊಹ್ಲಿ, ಬೌಲರ್‌ಗಳ ಪಟ್ಟಿಯಲ್ಲಿ ಜಸ್‌ಪ್ರೀತ್‌ ಬೂಮ್ರಾಗೆ ಅಗ್ರಸ್ಥಾನ.
ನವೆಂಬರ್‌ 1: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಆಶಿಶ್‌ ನೆಹ್ರಾ ವಿದಾಯ.
ನವೆಂಬರ್‌ 23: ಗೆಳತಿ ಹಾಗೂ ನಟಿ ಸಾಗರಿಕಾ ಘಾಟ್ಕೆ ಅವರನ್ನು ವರಿಸಿದ ಜಹೀರ್‌ ಖಾನ್‌.

* ಮಧ್ಯಮ ವೇಗಿ ಭುವನೇಶ್ವರ್‌ ಕುಮಾರ್‌, ಬಾಲ್ಯದ ಗೆಳತಿ ನೂಪುರ್‌ ನಗರ್‌ ಅವರನ್ನು ವಿವಾಹವಾದರು.

ನವೆಂಬರ್‌ 27:  ಟೆಸ್ಟ್‌ ಮಾದರಿಯಲ್ಲಿ ಅತಿ ವೇಗವಾಗಿ 300 ವಿಕೆಟ್‌ ಪಡೆದ ದಾಖಲೆ ಬರೆದ ಆರ್‌.ಅಶ್ವಿನ್‌. 54 ಪಂದ್ಯಗಳಿಂದ ಈ ಸಾಧನೆ.
ನವೆಂಬರ್‌ 29: ಸಚಿನ್‌ ತೆಂಡೂಲ್ಕರ್‌ಗೆ ಗೌರವ ಸಲ್ಲಿಸುವ ಸಲುವಾಗಿ ಅವರು ಧರಿಸುತ್ತಿದ್ದ 10 ಸಂಖ್ಯೆಯ ಪೋಷಾಕನ್ನು ಭಾರತದ ಯಾವ ಆಟಗಾರರೂ ಧರಿಸದಂತೆ ನಿರ್ಬಂಧ ಹೇರಲು ಬಿಸಿಸಿಐ ಚಿಂತನೆ.


–ರೋಹಿತ್‌ ಶರ್ಮಾ

ಡಿಸೆಂಬರ್‌ 6: ಶ್ರೀಲಂಕಾ ಎದುರಿನ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಡ್ರಾ ಮಾಡಿಕೊಂಡ ಭಾರತ 1-0ರಿಂದ ಸರಣಿ ಜಯಿಸಿತು.

* ವಿರಾಟ್‌ ಕೊಹ್ಲಿ ಪಡೆ ಸತತ ಒಂಬತ್ತು ಸರಣಿ (2015ರಿಂದ 2017) ಗೆದ್ದು ಆಸ್ಟ್ರೇಲಿಯಾದ ದಾಖಲೆ ಸರಿಗಟ್ಟಿತು.

ಡಿಸೆಂಬರ್‌ 10: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16,000 ರನ್‌ ಗಳಿಸಿದ ದೋನಿ. ಈ ಸಾಧನೆ ಮಾಡಿದ ಭಾರತದ ಆರನೇ ಆಟಗಾರ. ವಿಶ್ವದ ಎರಡನೇ ವಿಕೆಟ್‌ ಕೀಪರ್‌.
*ಶ್ರೀಲಂಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ 78ರನ್‌ಗಳಿಗೆ ಆಲೌಟ್‌ ಆದ ಭಾರತ. ಇದು ತವರಿನಲ್ಲಿ ತಂಡ ಗಳಿಸಿದ ಅತಿ ಕಡಿಮೆ ಮೊತ್ತ.
ಡಿಸೆಂಬರ್‌ 11: ನಟಿ ಅನುಷ್ಕಾ ಶರ್ಮಾ ಅವರನ್ನು ಇಟಲಿಯಲ್ಲಿ ವಿವಾಹವಾದ ವಿರಾಟ್‌ ಕೊಹ್ಲಿ.
ಡಿಸೆಂಬರ್‌ 13: ಲಂಕಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್‌ ಶರ್ಮಾ ದ್ವಿಶತಕ. ಏಕದಿನ ಮಾದರಿಯಲ್ಲಿ ಮೂರು ದ್ವಿಶತಕ ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್‌ ಎಂಬ ದಾಖಲೆ.

* ಭಾರತ ತಂಡ ಏಕದಿನ ಮಾದರಿಯಲ್ಲಿ 100 ಬಾರಿ 300ಕ್ಕಿಂತಲೂ ಹೆಚ್ಚು ರನ್‌ ಗಳಿಸಿದ ದಾಖಲೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ತಂಡ.

ಡಿಸೆಂಬರ್‌ 17: ಶ್ರೀಲಂಕಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಗೆದ್ದ ಭಾರತ ತಂಡ 2-1ರಿಂದ ಸರಣಿ ತನ್ನದಾಗಿಸಿಕೊಂಡಿತು.

*********

ಕೊಹ್ಲಿ ಮೈಲುಗಲ್ಲುಗಳು
* ಏಕದಿನ ಕ್ರಿಕೆಟ್‌ನ ಗುರಿ ಬೆನ್ನಟ್ಟಿದ ಇನಿಂಗ್ಸ್‌ಗಳಲ್ಲಿ ಅತಿಹೆಚ್ಚು ಶತಕ (18) ಗಳಿಸಿದ ಮೊದಲ ಆಟಗಾರ. ಅವರು ಸಚಿನ್‌ (17) ದಾಖಲೆ ಮೀರಿದರು.
*196ನೇ ಪಂದ್ಯದಲ್ಲಿ 30 ಶತಕ ಮತ್ತು 8,679 ರನ್‌ ಪೂರೈಸಿದ ಕೊಹ್ಲಿ. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ.
*ಸೆಪ್ಟೆಂಬರ್‌ 4 ರಂದು ಐಸಿಸಿ ಪ್ರಕಟಿಸಿದ ಏಕದಿನ ಬ್ಯಾಟ್ಸ್‌ಮನ್‌ಗಳ ಕ್ರಮಾಂಕ ಪಟ್ಟಿಯಲ್ಲಿ 887 ಪಾಯಿಂಟ್ಸ್‌ ಕಲೆಹಾಕಿದ ಕೊಹ್ಲಿ ಈ ಮೂಲಕ ಸಚಿನ್‌ ದಾಖಲೆ ಸರಿಗಟ್ಟಿದ್ದರು.
* ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 15,000ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ 334 ಇನಿಂಗ್ಸ್‌ಗಳಿಂದ ಈ ಸಾಧನೆ.
* ಫೋಬ್ಸ್‌ ನಿಯತಕಾಲಿಕೆ ಪ್ರಕಟಿಸಿದ ಕ್ರೀಡಾಪಟುಗಳ ಬ್ರ್ಯಾಂಡ್‌ ಮೌಲ್ಯದಲ್ಲಿ ಏಳನೇ ಸ್ಥಾನ.
* ವರ್ಷವೊಂದರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ ಗಳಿಸಿದ (2818) ಮೂರನೇ ಆಟಗಾರ ಎಂಬ ಹಿರಿಮೆ.
* ಈ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 31 ಪಂದ್ಯಗಳಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ ಸಾಧನೆ.ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ ದಾಖಲೆ ಸರಿಗಟ್ಟಿದ ವಿರಾಟ್‌.
*ಶ್ರೀಲಂಕಾ ವಿರುದ್ಧ ಡಿಸೆಂಬರ್‌ 3 ರಂದು ಫಿರೋಜ್‌ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ ವಿಶ್ವ ದಾಖಲೆ.
* ನಾಯಕನಾಗಿ ಆರು ದ್ವಿಶತಕ ಸಿಡಿಸಿದ ಏಕೈಕ ಬ್ಯಾಟ್ಸ್‌ಮನ್‌.
* ನಿರಂತರ ಎರಡು ಪಂದ್ಯಗಳಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಆರನೇ ಬ್ಯಾಟ್ಸ್‌ಮನ್‌.
*ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ವರ್ಷ 11 ಶತಕ ದಾಖಲಿಸಿದ ಮೊದಲ ನಾಯಕ.
*ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 16,000 ರನ್‌ ಬಾರಿಸಿದ ಮೊದಲ ಆಟಗಾರ. 350 ಇನಿಂಗ್ಸ್‌ಗಳಿಂದ ಈ ಸಾಧನೆ.
*ಟೆಸ್ಟ್‌ನಲ್ಲಿ ಅತಿ ವೇಗವಾಗಿ 20ಶತಕ ಸಿಡಿಸಿದ ಐದನೇ ಬ್ಯಾಟ್ಸ್‌ಮನ್‌ (105 ಇನಿಂಗ್ಸ್‌).
* ಟೆಸ್ಟ್‌ ಮಾದರಿಯಲ್ಲಿ 5,000 ರನ್‌ ಗಳಿಸಿದ ಭಾರತದ 11ನೇ ಆಟಗಾರ. ಅತಿ ವೇಗವಾಗಿ 5 ಸಹಸ್ರ ರನ್‌ ಗಳಿಸಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್‌.
* ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಗಳನ್ನು ಗಳಿಸಿದ ಸಾಧನೆ.
* ಅಂತರರಾಷ್ಟ್ರೀಯ ಟಿ-20ಯಲ್ಲಿ ಹೆಚ್ಚು ರನ್‌ ಗಳಿಸಿದ (1,943)ಎರಡನೇ ಆಟಗಾರ.
* ಏಕದಿನ ಮಾದರಿಯಲ್ಲಿ ಅತಿ ವೇಗವಾಗಿ 9,000 ರನ್‌ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌.
*200 ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಮೊದಲ ಆಟಗಾರ.
*ವಿಶ್ವ ಏಕದಿನ ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ.
*ಫೋರ್ಬ್ಸ್‌ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ 89ನೇ ಸ್ಥಾನ.
*ಸತತ ನಾಲ್ಕು ಟೆಸ್ಟ್‌ ಸರಣಿಗಳಲ್ಲಿ ನಾಲ್ಕು ದ್ವಿಶತಕ ಸಿಡಿಸಿದ ವಿಶ್ವ ದಾಖಲೆ.
*50ನೇ ಟೆಸ್ಟ್‌ನಲ್ಲಿ ಶತಕದ ಸಾಧನೆ.

2018ರ ಪ್ರಮುಖ ಕ್ರೀಡಾಕೂಟಗಳು/ಟೂರ್ನಿಗಳು
ಜನವರಿ 15ರಿಂದ 28: ಆಸ್ಟ್ರೇಲಿಯಾ ಓಪನ್‌ ಟೆನಿಸ್‌–ಮೆಲ್ಬರ್ನ್‌
ಫೆಬ್ರುವರಿ 28ರಿಂದ ಮಾರ್ಚ್‌ 4: ವಿಶ್ವ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌–ನೆದರ್ಲೆಂಡ್ಸ್‌

ಏಪ್ರಿಲ್‌ 4ರಿಂದ 15: ಕಾಮನ್‌ವೆಲ್ತ್‌ ಗೇಮ್ಸ್‌–ಗೋಲ್ಡ್ ಕಾಸ್ಟ್‌ ಆಸ್ಟ್ರೇಲಿಯಾ
ಮೇ 4ರಿಂದ 20: ಐಸ್ ಹಾಕಿ ವಿಶ್ವ ಚಾಂಪಿಯನ್‌ಷಿಪ್‌–ಡೆನ್ಮಾರ್ಕ್‌
ಮೇ 27ರಿಂದ ಜೂನ್‌ 10: ಫ್ರೆಂಚ್ ಓಪನ್ ಟೆನಿಸ್‌–ಪ್ಯಾರಿಸ್‌
ಜೂನ್‌ 14ರಿಂದ ಜುಲೈ 15: ಫಿಫಾ ವಿಶ್ವಕಪ್‌ ಫುಟ್‌ಬಾಲ್‌–ರಷ್ಯಾ
ಜೂನ್‌ 14ರಿಂದ 17: ಅಮೆರಿಕ ಓಪನ್ ಗಾಲ್ಫ್‌–ನ್ಯೂಯಾರ್ಕ್‌
ಜುಲೈ 2ರಿಂದ: ವಿಂಬಲ್ಡನ್‌ ಟೆನಿಸ್ ಟೂರ್ನಿ–ಲಂಡನ್‌
ಜುಲೈ 19ರಿಂದ 22: ಬ್ರಿಟಿಷ್‌ ಓಪನ್‌ ಗಾಲ್ಫ್‌–ಸ್ಕಾಟ್ಲೆಂಡ್‌
ಜುಲೈ 21ರಿಂದ ಆಗಸ್ಟ್‌ 5: ಮಹಿಳಾ ಹಾಕಿ ವಿಶ್ವಕಪ್‌–ಲಂಡನ್‌
ಆಗಸ್ಟ್‌ 18ರಿಂದ ಸೆಪ್ಟೆಂಬರ್‌ 2: ಏಷ್ಯನ್ ಗೇಮ್ಸ್‌–ಜಕಾರ್ತ, ಇಂಡೋನೇಷ್ಯಾ
ಆಗಸ್ಟ್‌ 27ರಿಂದ: ಅಮೆರಿಕ ಓಪನ್ ಟೆನಿಸ್‌–ನ್ಯೂಯಾರ್ಕ್‌
ಸೆಪ್ಟೆಂಬರ್‌ 1ರಿಂದ 9: ವಿಶ್ವ ರೋಯಿಂಗ್‌ ಚಾಂಪಿಯನ್‌ಷಿಪ್‌–ಬಲ್ಗೇರಿಯಾ
ಸೆಪ್ಟೆಂಬರ್‌ 10ರಿಂದ 23: ವಿಶ್ವ ಈಕ್ವೆಸ್ಟ್ರಿಯನ್‌ ಗೇಮ್ಸ್‌–ಕೆರೊಲಿನ, ಅಮೆರಿಕ
ಸೆಪ್ಟೆಂಬರ್‌ 10ರಿಂದ 30: ವಿಶ್ವ ಮಹಿಳಾ ವಾಲಿಬಾಲ್ ಚಾಂಪಿಯನ್‌ಷಿಪ್‌–ಇಟಲಿ/ಬಲ್ಗೇರಿಯಾ
ಸೆಪ್ಟೆಂಬರ್‌ 11ರಿಂದ 23: ಬೇಸಿಗೆ ಯುವ ಒಲಿಂಪಿಕ್ಸ್‌–ಬ್ಯೂನಸ್ ಐರಿಸ್, ಅರ್ಜೆಂಟೀನಾ
ಸೆಪ್ಟೆಂಬರ್‌ 23ರಿಂದ 30: ವಿಶ್ವ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌–ಆಸ್ಟ್ರೇಲಿಯಾ
ಅಕ್ಟೋಬರ್‌ 25ರಿಂದ ನವೆಂಬರ್‌ 3: ವಿಶ್ವ ಜಿಮ್ನಾಸ್ಟಿಕ್ಸ್‌ ಚಾಂಪಿಯನ್‌ಷಿಪ್‌–ಖತಾರ್‌
ನವೆಂಬರ್‌ 24ರಿಂದ ಡಿಸೆಂಬರ್‌ 16: ವಿಶ್ವಕಪ್ ಹಾಕಿ: ಭುವನೇಶ್ವರ

2018ರ ಪ್ರಮುಖ ಕ್ರಿಕೆಟ್‌ ಟೂರ್ನಿಗಳು
ಜನವರಿ 5ರಿಂದ ಫೆಬ್ರುವರಿ 24:
ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ‌
ಜುಲೈ 3ರಿಂದ ಸೆಪ್ಟೆಂಬರ್‌ 7: ಭಾರತ ತಂಡದ ಇಂಗ್ಲೆಂಡ್ ‍ಪ್ರವಾಸ
ಫೆಬ್ರುವರಿ 2ರಿಂದ 24: ಭಾರತ ಮಹಿಳಾ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.