ADVERTISEMENT

ರಿಟೇಲ್: ಉಚಿತ ತರಬೇತಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 19:30 IST
Last Updated 12 ಆಗಸ್ಟ್ 2012, 19:30 IST

ಭಾರ್ತಿ ಎಂಟರ್‌ಪ್ರೈಸಸ್ ಮತ್ತು ವಾಲ್‌ಮಾರ್ಟ್ ಸಹಯೋಗದ ಭಾರ್ತಿ ವಾಲ್‌ಮಾರ್ಟ್ ಹಾಗೂ ಹೋಪ್ ಫೌಂಡೇಷನ್ ಜತೆಗೂಡಿ ರಿಟೇಲ್ ಕ್ಷೇತ್ರಕ್ಕೆ ಬೇಕಾದ ಉದ್ಯೋಗಿಗಳನ್ನು ತಯಾರು ಮಾಡಲು ಉಚಿತ ಅಲ್ಪಾವಧಿ ವೃತ್ತಿ ತರಬೇತಿ ಕೇಂದ್ರ ಆರಂಭಿಸಿವೆ. ಇಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಇಲ್ಲಿನ ಪಠ್ಯಕ್ರಮ ವಾಲ್‌ಮಾರ್ಟ್‌ನ ಮಾದರಿಯನ್ನು ಆಧರಿಸಿರುತ್ತದೆ. ತರಬೇತಿ ಪೂರೈಸಿದ ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರ ಲಭಿಸಲಿದೆ. ಮಾಹಿತಿಗೆ: 98452 00302.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.