ADVERTISEMENT

ಡೇವಿಸ್‌ ಕಪ್‌ ಸ್ಥಳಾಂತರ?

ರಾಯಿಟರ್ಸ್
Published 16 ಅಕ್ಟೋಬರ್ 2019, 19:51 IST
Last Updated 16 ಅಕ್ಟೋಬರ್ 2019, 19:51 IST

ನವದೆಹಲಿ: ಪಾಕಿಸ್ತಾನ ವಿರುದ್ಧ ನಡೆಯುವ ಡೇವಿಸ್‌ ಕಪ್‌ ಟೂರ್ನಿಗೆ ಭಾರತ ಟೆನಿಸ್‌ ಸಂಸ್ಥೆ ವೀಸಾಗಾಗಿ ಅರ್ಜಿ ಸಲ್ಲಿಸಿದೆ. ಆದರೆ ಇಸ್ಲಾಮಾಬಾದ್‌ನಲ್ಲಿ ಮುಂದಿನ ತಿಂಗಳು ನಡೆಯಬೇಕಿರುವ ಟೂರ್ನಿಯು ಬೇರೆ ಕಡೆ ಸ್ಥಳಾಂತರಗೊಳ್ಳುವ ನಿರೀಕ್ಷೆಯಿದೆ ಎಂದು ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಪ್ರಧಾನ ಕಾರ್ಯದರ್ಶಿ ಹಿರಣ್ಮಯ್‌ ಚಟರ್ಜಿ ತಿಳಿಸಿದ್ದಾರೆ.

ಏಷ್ಯಾ ಓಷಿನಿಯಾ ಗ್ರೂಪ್‌ 1ರ ಟೂರ್ನಿಯು ಸೆಪ್ಟೆಂಬರ್‌ 14–15ರಂದು ನಿಗದಿಯಾಗಿತ್ತು. ಭದ್ರತೆ ಕಾರಣ ನೀಡಿ ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌) ಅದನ್ನು ನವಂಬರ್‌ ತಿಂಗಳ ಅಂತ್ಯಕ್ಕೆ ಮುಂದೂಡಿತ್ತು.

‘ನಾವು ವೀಸಾಗಾಗಿ ಅರ್ಜಿ ಸಲ್ಲಿಸಿದ್ದೇವೆ. ಟೂರ್ನಿ ನಡೆಯುವ ಸ್ಥಳ ನಿಗದಿಗೆ ಕಾಯುತ್ತಿದ್ದೇವೆ. ಟೂರ್ನಿಯನ್ನು ಬೇರೆ ಕಡೆ ಆಯೋಜಿಸಲು ಮನವಿ ಮಾಡಿಕೊಂಡಿದ್ದೇವೆ. ನವಂಬರ್‌ 3ರಂದು ಈ ಬಗ್ಗೆ ತಿಳಿಸುವುದಾಗಿ ಐಟಿಎಫ್‌ ಹೇಳಿದೆ’ ಎಂದು ಚಟರ್ಜಿ ರಾಯಿಟರ್ಸ್‌ ಸುದ್ದಿಸಂಸ್ಥೆಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.