ADVERTISEMENT

ಟೆನಿಸ್‌ ಟೂರ್ನಿ: ಅಮೋದಿನಿ, ಕಂದವೇಲ್‌ಗೆ ಪ್ರಶಸ್ತಿ

ಎಐಟಿಎ ಸಿಎಸ್‌7 18 ವರ್ಷದೊಳಗಿನವರ ಟೆನಿಸ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 14:04 IST
Last Updated 22 ಏಪ್ರಿಲ್ 2022, 14:04 IST
ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ಅಮೋದಿನಿ ವಿ. ನಾಯಕ್‌ ಮತ್ತು ಕಂದವೇಲ್ ಎಂ.
ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ಅಮೋದಿನಿ ವಿ. ನಾಯಕ್‌ ಮತ್ತು ಕಂದವೇಲ್ ಎಂ.   

ಬೆಂಗಳೂರು: ಕರ್ನಾಟಕದ ಅಮೋದಿನಿ ವಿ. ನಾಯಕ್ ಮತ್ತು ತಮಿಳುನಾಡಿನ ಕಂದವೇಲ್‌ ಎಂ. ಅವರು ಎಐಟಿಎ ಸಿಎಸ್‌7 18 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕಿಯರ ಮತ್ತು ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಕಂದವೇಲ್‌6-2, 6-4ರಿಂದ ಕರ್ನಾಟಕದ ಆರ್ಯ ಗಣಪತಿ ಕಳ್ಳಂಬೆಳ್ಳ ಅವರನ್ನು ಪರಾಭವಗೊಳಿಸಿದರು. ಆರ್ಯ ಅವರು ಡಬಲ್ಸ್ ವಿಭಾಗದಲ್ಲಿ ಕಂದವೇಲ್ ಜೊತೆಗೂಡಿ ಪ್ರಶಸ್ತಿ ಜಯಿಸಿದ್ದರು.

ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ6-4, 6-0ರಿಂದ ಮೇಘನಾ ಜಿ.ಡಿ. ಅವರಿಗೆ ಸೋಲುಣಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.