ADVERTISEMENT

ಅಂತಿಮ ಸುತ್ತಿನಲ್ಲಿ ಎಡವಿದ ಅಂಕಿತಾ ರೈನಾ

ಆಸ್ಟ್ರೇಲಿಯಾ ಓಪನ್ ಟೆನಿಸ್ ಅರ್ಹತಾ ಟೂರ್ನಿ

ಪಿಟಿಐ
Published 13 ಜನವರಿ 2021, 13:37 IST
Last Updated 13 ಜನವರಿ 2021, 13:37 IST
ಅಂಕಿತಾ ರೈನಾ–ಎಎಫ್‌ಪಿ ಚಿತ್ರ
ಅಂಕಿತಾ ರೈನಾ–ಎಎಫ್‌ಪಿ ಚಿತ್ರ   

ಮೆಲ್ಬರ್ನ್‌: ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದಕ್ಕೆ ಅರ್ಹತೆ ಪಡೆದುಕೊಳ್ಳಬೇಕೆಂಬ ಭಾರತದ ಟೆನಿಸ್ ತಾರೆ ಅಂಕಿತಾ ರೈನಾ ಕನಸು ಈ ಬಾರಿಯೂ ನನಸಾಗಲಿಲ್ಲ. ಆಸ್ಟ್ರೇಲಿಯಾ ಓಪನ್ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಅವರು ಬುಧವಾರ ಸರ್ಬಿಯಾದ ಓಲ್ಗಾ ಡೆನಿಲೊವಿಚ್ ಎದುರು ಸೋತರು.

ದುಬೈನಲ್ಲಿ ನಡೆಯುತ್ತಿರುವ ಅರ್ಹತಾ ಸುತ್ತಿನಮಹಿಳಾ ಸಿಂಗಲ್ಸ್ ಟೂರ್ನಿಯ ಪಂದ್ಯದಲ್ಲಿ ಅಂಕಿತಾ 2–6, 6–3, 1–6ರಿಂದ ಸೋಲು ಅನುಭವಿಸಿದರು. ಈ ಹಣಾಹಣಿ ಎರಡು ತಾಸುಗಳವರೆಗೆ ನಡೆಯಿತು.

ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದಕ್ಕೆ ಅರ್ಹತೆ ಗಿಟ್ಟಿಸಲು ಅಂಕಿತಾ ನಡೆಸಿದ ಆರನೇ ಪ್ರಯತ್ನ ಇದಾಗಿತ್ತು.

ADVERTISEMENT

ಸುಮಿತ್‌ ನಗಾಲ್‌ ಅವರು ಈ ಬಾರಿಯ ಆಸ್ಟ್ರೇಲಿಯಾ ಓಪನ್ ಸಿಂಗಲ್ಸ್ ವಿಭಾಗದ ಮುಖ್ಯ ಸುತ್ತಿನಲ್ಲಿ ಸ್ಪರ್ಧಿಸಲಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ. ನಗಾಲ್ ಅವರಿಗೆ ವೈಲ್ಡ್‌ಕಾರ್ಡ್‌ ಪ್ರವೇಶ ಸಿಕ್ಕಿದೆ.

ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲೇ ರಾಮಕುಮಾರ್ ರಾಮನಾಥನ್ ಅವರು ನಿರ್ಗಮಿಸಿದ್ದರೆ, ಪ್ರಜ್ಞೇಶ್ ಗುಣೇಶ್ವರನ್‌ ಎರಡನೇ ಸುತ್ತಿನಲ್ಲಿ ಸೋಲುಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.