ADVERTISEMENT

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ ಅರ್ಹತಾ ಸ್ಪರ್ಧೆ: ಅಂಕಿತಾ ಮುನ್ನಡೆ

ರಾಮ್‌ಕುಮಾರ್‌ಗೆ ಆಘಾತ

ಪಿಟಿಐ
Published 20 ಆಗಸ್ಟ್ 2019, 19:30 IST
Last Updated 20 ಆಗಸ್ಟ್ 2019, 19:30 IST
ಅಂಕಿತಾ ರೈನಾ–ಎಎಫ್‌ಪಿ ಚಿತ್ರ
ಅಂಕಿತಾ ರೈನಾ–ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌: ಭಾರತದ ಅಂಕಿತಾ ರೈನಾ ಅಮೆರಿಕ ಓಪನ್‌ ಟೆನಿಸ್‌ ಅರ್ಹತಾ ಸ್ಪರ್ಧೆಯ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಆದರೆ ಪುರುಷರ ಸಿಂಗಲ್ಸ್ ಹಣಾಹಣಿಯಲ್ಲಿ ರಾಮ್‌ಕುಮಾರ್‌ ರಾಮನಾಥನ್‌ ನಿರಾಸೆ ಅನುಭವಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 194ನೇ ಸ್ಥಾನದಲ್ಲಿರುವ ಅಂಕಿತಾ, ತನಗಿಂತ ಮೇಲಿನ ರ‍್ಯಾಂಕ್‌ನ ಬೆಲ್ಜಿಯಂ ಆಟಗಾರ್ತಿ ವೈಸಲಿನ್‌ ಬೊನಾವೆಂಚರ್‌ಎದುರು 6–1, 1–6, 6–2ರಿಂದ ಗೆಲುವಿನ ನಗೆ ಬೀರಿದರು.

111ನೇ ರ‍್ಯಾಂಕಿಂಗ್‌ನ ಬೊನಾವೆಂಚರ್‌ರನ್ನು 2014ರಲ್ಲಿ ಅವರ ದೇಶದಲ್ಲೇ ಅಂಕಿತಾ ಮಣಿಸಿದ್ದರು.

ADVERTISEMENT

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ರಾಮ್‌ಕುಮಾರ್‌ ಅವರು 5–7, 6–7ರಿಂದ ಇಟಲಿಯ ಫಿಲಿಪ್ಪೊ ಬಾಲ್ಡಿ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.