ADVERTISEMENT

ಆನ್‌ಲೈನ್ ಟೆನಿಸ್ ತರಬೇತಿ: ಕೋರ್ಸೆರಾ ಜೊತೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 7 ಮೇ 2020, 19:30 IST
Last Updated 7 ಮೇ 2020, 19:30 IST
ಟೆನಿಸ್
ಟೆನಿಸ್   

ಮುಂಬೈ: ಕೊರೊನಾ ಹಾವಳಿಯಿಂದಾಗಿ ಉಂಟಾಗಿರುವ ಸಂಕಷ್ಟದಿಂದ ತರಬೇತಿ ಆರಂಭಿಸಲು ಸಾಧ್ಯವಾಗದ ಕಾರಣ ಆನ್‌ಲೈನ್ ತರಬೇತಿಗೆ ಒತ್ತು ನೀಡಿರುವ ಎಟಿಪಿ, ಇದಕ್ಕಾಗಿ ಕೊರ್ಸೇರಾ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದೆ.

ಟೆನಿಸ್‌ಗೆ ಸಂಬಂಧಿಸಿದ ಹೊಸ ವಿಷಯಗಳು ಮತ್ತು ಕೌಶಲಗಳನ್ನು ಕಲಿಯಲು, ಲಾಕ್‌ಡೌನ್ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವ ವಿಷಯಗಳಿಗೆ ತರಬೇತಿಯಲ್ಲಿ ಒತ್ತು ಸಿಗಲಿದೆ.

ಕೊರೊನಾ ಕಾಟದಿಂದಾಗಿ ಮಾರ್ಚ್ ಮೊದಲ ವಾರದಿಂದಲೇ ಜಗತ್ತಿನಾದ್ಯಂತವೃತ್ತಿಪರ ಟೆನಿಸ್ ಸ್ಥಗಿತಗೊಂಡಿತ್ತು. ಇದರಿಂದ ಅನೇಕ ಆಟಗಾರರು ತೊಂದರೆಗೆ ಸಿಲುಕಿದ್ದು ಬಹುತೇಕರು ಮಾನಸಿಕ ತೊಳಲಾಟ ಅನುಭವಿಸುತ್ತಿದ್ದಾರೆ.

ADVERTISEMENT

ಒಪ್ಪಂದದ ಅವಧಿ ಎರಡು ವರ್ಷಗಳದ್ದಾಗಿದ್ದು ವ್ಯಾಪಾರ ವಹಿವಾಟು, ತಂತ್ರಜ್ಞಾನ, ತಂತ್ರಾಂಶ ವಿಜ್ಞಾನ, ವ್ಯಕ್ತಿತ್ವ ವಿಕಾಸ ಮತ್ತು ಮಾನಸಿಕ ಸಮತೋಲನ ಮೊದಲಾದ ನಾಲ್ಕು ಸಾವಿರಕ್ಕೂ ಹೆಚ್ಚು ವಿಷಯಗಳನ್ನು ಕಲಿಯಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.