ADVERTISEMENT

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ: ಜೊಕೊವಿಚ್‌, ಸೆರೆನಾ ಆಕರ್ಷಣೆ

ಏಜೆನ್ಸೀಸ್
Published 19 ಜನವರಿ 2020, 20:00 IST
Last Updated 19 ಜನವರಿ 2020, 20:00 IST
ನೊವಾಕ್‌ ಜೊಕೊವಿಚ್‌ ಹಾಗೂ ಸೆರೆನಾ ವಿಲಿಯಮ್ಸ್
ನೊವಾಕ್‌ ಜೊಕೊವಿಚ್‌ ಹಾಗೂ ಸೆರೆನಾ ವಿಲಿಯಮ್ಸ್   

ಮೆಲ್ಬರ್ನ್‌: ಹಾಲಿ ಚಾಂಪಿಯನ್‌ ನೊವಾಕ್‌ ಜೊಕೊವಿಚ್‌ ಹಾಗೂ ಅಮೆರಿಕದ ಸೆರೆನಾ ವಿಲಿಯಮ್ಸ್ ಈ ಬಾರಿಯ ಆಸ್ಟ್ರೇಲಿಯ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಹೊಸ ದಶಕಕ್ಕೆ ಪದಾರ್ಪಣೆ ಮಾಡಿರುವ ಈ ವೇಳೆ ಯುವ ಆಟಗಾರರ ಸವಾಲನ್ನು ಅನುಭವಿ ಆಟಗಾರರುಎದುರಿಸಬೇಕಿದೆ.

ಇತ್ತೀಚೆಗೆ ಉಂಟಾದ ಕಾಳ್ಗಿಚ್ಚಿನ ಹೊಗೆಯಿಂದ ಮೆಲ್ಬರ್ನ್‌ ಈಗ ಮುಕ್ತವಾಗಿದೆ. ಪುರುಷರ ಸಿಂಗಲ್ಸ್ ವಿಭಾಗದಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿರುವ ಸರ್ಬಿಯದ ಜೊಕೊವಿಚ್‌ ಹಾಗೂ 24ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಸೆರೆನಾ ಟೂರ್ನಿಯ ನೆಚ್ಚಿನ ಆಟಗಾರರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ, ಅಗ್ರ ಶ್ರೇಯಾಂಕವನ್ನು ಹೊಂದಿರುವ ಸ್ಪೇನ್‌ನ ರಫೆಲ್‌ ನಡಾಲ್‌ ಹಾಗೂ 21ನೇ ಗ್ರ್ಯಾನ್‌ಸ್ಲಾಮ್‌ ಟ್ರೋಫಿ ಗೆಲ್ಲಲು ಕಾತರದಲ್ಲಿರುವ ದಿಗ್ಗಜ ಆಟಗಾರ ರೋಜರ್‌ ಫೆಡರರ್‌ ಅವರ ಮೇಲೂ ನಿರೀಕ್ಷೆಯಿದೆ.

ADVERTISEMENT

ಟೆನಿಸ್‌ನ ‘ಬಿಗ್‌ 3’ ಎಂದು ಹೇಳಲಾಗುವ ನಡಾಲ್‌, ಜೊಕೊವಿಚ್‌ ಹಾಗೂ ಫೆಡರರ್‌ 2004ರಿಂದೀಚೆಗೆ ಎಲ್ಲ ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಪಾರಮ್ಯ ಮೆರೆದಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ ಮೂರು ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಸೆರೆನಾ ಅವರು ಆಸ್ಟ್ರೇಲಿಯಾದ ಮಾರ್ಗರೇಟ್‌ ಕೋರ್ಟ್‌ ಅವರ 24 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯ ಸರಿಗಟ್ಟಲು ಒಂದು ಪ್ರಶಸ್ತಿ ದೂರವಿದ್ದಾರೆ. ಸೋ

ಮವಾರ ಆರಂಭವಾಗುವ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ 40 ವರ್ಷದ ವೀನಸ್‌ ವಿಲಿಯಮ್ಸ್ ಅವರಿಗೆ ಉದಯೋನ್ಮುಖ ತಾರೆ 15ರ ಹರಯದ ಕೊಕೊ ಗಫ್‌ ಎದುರಾಳಿ.ಮೊದಲ ಸುತ್ತಿನಲ್ಲಿ ಪ್ರಮುಖ ಆಟಗಾರರಾದ ನಡಾಲ್‌, ಬೊಲಿವಿಯದ ಹ್ಯೂಗೊ ಡೆಲ್ಲಿಯನ್‌ ಎದುರು, ಜೊಕೊವಿಚ್‌, ಜರ್ಮನಿಯ ಜಾನ್‌ ಲೆನ್ನಾರ್ಡ್‌ ಸ್ಟ್ರಫ್‌ ವಿರುದ್ಧ ಸೆಣಸಲಿದ್ದಾರೆ. ಫೆಡರರ್‌– ಸ್ಟೀವ್‌ ಜಾನ್ಸನ್‌, ಡೇನಿಯಲ್‌ ಮೆಡ್ವೆಡೆವ್‌– ಫ್ರಾನ್ಸೆಸ್‌ ಟೈಫೊಯ್‌, ಅಲೆಕ್ಸಾಂಡರ್‌ ಜ್ವೆರೆವ್‌– ಮಾರ್ಕೊ ಸೆಚಿನಾಟೊ ನಡುವೆ ಹಣಾಹಣಿ ನಡೆಯಲಿವೆ.

ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯಗಳಲ್ಲಿ ಆ್ಯಶ್ಲೆ ಬಾರ್ಟಿ– ಲೇಸಿಯಾ ಸುರೆಂಕೊ, ಕರೋಲಿನಾ ಪ್ಲಿಸ್ಕೊವಾ–ಕ್ರಿಸ್ಟಿನಾ ಮ್ಲಾಡೆನೊವಿಕ್‌, ಸೆರೆನಾ ವಿಲಿಯಮ್ಸ್–ಅನಸ್ತಾಸಿಯಾ ಪೊಟಪೊವಾ, ನವೊಮಿ ಒಸಾಕಾ–ಮಾರಿ ಬೌಜ್‌ಕೊವಾ, ಸಿಮೊನಾ ಹಲೆಪ್‌–ಜೆನ್ನಿಫರ್‌ ಬ್ರಾಡಿ ಪರಸ್ಪರ ಸೆಣಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.