ADVERTISEMENT

ಟೆನಿಸ್‌: ಏಷ್ಯಾ– ಒಷಾನಿಯಾ ಗುಂಪಿನಲ್ಲೇ ಉಳಿದ ಭಾರತ

ಪಿಟಿಐ
Published 17 ಏಪ್ರಿಲ್ 2021, 19:31 IST
Last Updated 17 ಏಪ್ರಿಲ್ 2021, 19:31 IST
ಕರ್ಮನ್ ಕೌರ್ ಥಂಡಿ ಆಟದ ವೈಖರಿ
ಕರ್ಮನ್ ಕೌರ್ ಥಂಡಿ ಆಟದ ವೈಖರಿ   

ಜುರ್ಮಲಾ, ಲಾಟ್ವಿಯಾ: ಭಾರತದ ಅಂಕಿತಾ ರೈನಾ ಅವರು ಲಾಟ್ವಿಯಾ ಎದುರು ನಡೆಯುತ್ತಿರುವ ಬಿಲಿ ಜೀನ್ ಕಿಂಗ್ ಕಪ್ ವಿಶ್ವ ಗುಂಪಿನ ಪ್ಲೇ ಆಫ್ ಟೆನಿಸ್ ಟೂರ್ನಿಯ ಮೂರನೇ ಸಿಂಗಲ್ಸ್ ಪಂದ್ಯದಲ್ಲಿ ಸೋಲು ಅನುಭವಿಸಿದರು. ಗೆಲ್ಲಲೇಬೇಕಿದ್ದ ಈ ಪಂದ್ಯದಲ್ಲಿ ಭಾರತದ ಆಟಗಾರ್ತಿಯು 0–6, 6–7ರಿಂದ ಅನಸ್ತೇಸಿಯಾ ಸೆವಾಸ್ತೊವಾ ಎದುರು ಎಡವಿದರು. ಇದರೊಂದಿಗೆ ಟೂರ್ನಿಯಲ್ಲಿ 0–3 ಹಿನ್ನಡೆ ಕಂಡ ಭಾರತ ತಂಡವು ಏಷ್ಯಾ ಒಷಾನಿಯಾ ಗುಂಪಿನಲ್ಲೇ ಉಳಿಯಿತು.

ಟೂರ್ನಿಯ ಇತಿಹಾಸದಲ್ಲಿ ಭಾರತ ಮೊದಲ ಬಾರಿಗೆ ಪ್ಲೇ ಆಫ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿತ್ತು.

ಕರ್ಮನ್ ಕೌರ್ ಥಂಡಿ ಅವರು ಶುಕ್ರವಾರ ರಾತ್ರಿ ನಡೆದ ಸಿಂಗಲ್ಸ್ ಹಣಾಹಣಿಯಲ್ಲಿ ಅವರು 4–6, 0–6ರಿಂದ ಅನಸ್ತೇಸಿಯಾ ಸೆವಾಸ್ತೊವಾ ಎದುರು ಎಡವಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.