ADVERTISEMENT

ಕ್ರೊವೇಷ್ಯಾದ ಕೊರಿಕ್‌‌ಗೂ ಕೋವಿಡ್‌

ಏಜೆನ್ಸೀಸ್
Published 22 ಜೂನ್ 2020, 17:29 IST
Last Updated 22 ಜೂನ್ 2020, 17:29 IST
ಬೊರ್ನಾ ಕೊರಿಕ್
ಬೊರ್ನಾ ಕೊರಿಕ್   

ಪ್ಯಾರಿಸ್‌: ಕ್ರೊವೇಷ್ಯಾದ ಟೆನಿಸ್‌ ಆಟಗಾರ ಬೊರ್ನಾ ಕೊರಿಕ್‌ ಅವರಿಗೂ ಕೋವಿಡ್‌–19 ಇರುವುದು ಸೋಮವಾರ ಖಚಿತಪಟ್ಟಿದೆ.

ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಆಯೋಜಿಸಿದ್ದ ಏಡ್ರಿಯನ್‌ ಟೂರ್‌ ಪ್ರದರ್ಶನ ಟೆನಿಸ್‌ ಟೂರ್ನಿಯಲ್ಲಿ ಕೊರಿಕ್‌ ಕೂಡ ಪಾಲ್ಗೊಂಡಿದ್ದರು. ಈ ಟೂರ್ನಿಯಲ್ಲಿ ಆಡಿದ್ದ ಮತ್ತೊಬ್ಬ ಆಟಗಾರ ಗ್ರಿಗರ್‌ ಡಿಮಿಟ್ರೋವ್‌ ಅವರಿಗೆ ಕೊರೊನಾ ಸೋಂಕು ತಗುಲಿದ್ದು ಭಾನುವಾರ ದೃಢಪಟ್ಟಿತ್ತು. ಹೋದ ಶನಿವಾರ ನಡೆದಿದ್ದ ಪಂದ್ಯದಲ್ಲಿಕೊರಿಕ್‌ ಹಾಗೂ ಡಿಮಿಟ್ರೋವ್‌ ಪೈಪೋಟಿ ನಡೆಸಿದ್ದರು. ಆ ಹಣಾಹಣಿಯಲ್ಲಿ ಕೊರಿಕ್‌‌ ಗೆದ್ದಿದ್ದರು.

‘ಎಲ್ಲರಿಗೂ ನಮಸ್ಕಾರ. ನನಗೂ ಕೊರೊನಾ ಸೋಂಕು ತಗುಲಿದೆ. ಸೋಂಕಿನ ಯಾವ ಲಕ್ಷಣಗಳೂ ನನ್ನಲ್ಲಿ ಗೋಚರಿಸಿರಲಿಲ್ಲ. ಸದ್ಯ ನಾನು ಆರಾಮವಾಗಿಯೇ ಇದ್ದೇನೆ. ಎಲ್ಲರೂ ಮನೆಯಲ್ಲೇ ಸುರಕ್ಷಿತವಾಗಿರಿ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಕೊರಿಕ್‌, ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

‘ಹಿಂದಿನ ಕೆಲ ದಿನಗಳಿಂದ ನನ್ನ ಜೊತೆ ಸಂಪರ್ಕ ಹೊಂದಿದ್ದವರೆಲ್ಲಾ ದಯಮಾಡಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಅವರು ಮನವಿ ಮಾಡಿದ್ದಾರೆ.

23 ವರ್ಷ ವಯಸ್ಸಿನ ಕೊರಿಕ್‌, ಪುರುಷರ ಸಿಂಗಲ್ಸ್‌ ವಿಭಾಗದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿದ್ದಾರೆ.

ಬಿಡುವಿನ ವೇಳೆ ಜೊಕೊವಿಚ್‌, ಡಿಮಿಟ್ರೋವ್, ಮರಿನ್‌ ಸಿಲಿಕ್‌ ಹಾಗೂ ಕೊರಿಕ್‌ ಅವರು ಜೊತೆಯಾಗಿಯೇ ಫುಟ್‌ಬಾಲ್‌ ಹಾಗೂ ಬ್ಯಾಸ್ಕೆಟ್‌ಬಾಲ್‌ ಆಡಿದ್ದರು. ಹೀಗಾಗಿ ಇತರರಿಗೂ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.