ADVERTISEMENT

ಟೆನಿಸ್‌: ಜೆನಿಫರ್‌ಗೆ ಮಣಿದ ಕೊಕೊ ಗಫ್‌

ಏಜೆನ್ಸೀಸ್
Published 16 ಆಗಸ್ಟ್ 2020, 7:13 IST
Last Updated 16 ಆಗಸ್ಟ್ 2020, 7:13 IST
ಜೆನಿಫರ್‌ ಬ್ರಾಡಿ ಆಟದ ವೈಖರಿ–ಎಎಫ್‌ಪಿ ಚಿತ್ರ
ಜೆನಿಫರ್‌ ಬ್ರಾಡಿ ಆಟದ ವೈಖರಿ–ಎಎಫ್‌ಪಿ ಚಿತ್ರ   

ಲೆಕ್ಸಿಂಗ್ಟನ್‌: ಅಮೆರಿಕದ ಯುವ ಟೆನಿಸ್‌ ತಾರೆ ಕೋಕೊ ಗಫ್‌ ಅವರು ಟಾಪ್‌ ಸೀಡ್‌ ಓಪನ್‌ ಟೂರ್ನಿಯಲ್ಲಿ ಸೋಲು ಅನುಭವಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಟಾಟಾ ಸೀಡ್‌ ಓಪನ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಅವರು 2–6, 6–4ರಿಂದ ಜೆನಿಫರ್‌ ಬ್ರಾಡಿ ಎದುರು ಪರಾಭವಗೊಂಡರು.

ಟೂರ್ನಿಯ ಫೈನಲ್‌ನಲ್ಲಿ ಅಮೆರಿಕದ ಜೆನಿಫರ್‌ ಅವರು ಸ್ವಿಟ್ಜರ್ಲೆಂಡ್‌ನ ಜಿಲ್‌ ಟಿಚ್‌ಮನ್‌ ಅವರನ್ನು ಎದುರಿಸಲಿದ್ದಾರೆ. ಅಮೆರಿಕದಲ್ಲಿ ಕೊರೊನಾ ಕಾಲದಲ್ಲಿ ನಡೆಯುತ್ತಿರುವ ಮೊದಲ ಟೆನಿಸ್ ಟೂರ್ನಿ ಇದು.

ನಾಲ್ಕರ ಘಟ್ಟದ ಪಂದ್ಯದಲ್ಲಿ ಜೆನಿಫರ್‌ ಅವರು ಎಂಟು ಏಸ್‌ಗಳನ್ನು ಸಿಡಿಸಿದರು. 16 ವರ್ಷದ ಗಫ್‌ ಉತ್ತಮ ಪೈಪೋಟಿ ನೀಡಿದರೂ ಸೋಲು ತಪ್ಪಿಸಿಕೊಳ್ಳಲಾಗಲಿಲ್ಲ.

ADVERTISEMENT

ಮತ್ತೊಂದು ಸೆಮಿಫೈನಲ್‌ ಹಣಾಹಣಿಯಲ್ಲಿ ಟಿಚಮನ್‌ ಅವರು 6–3, 6–2ರಿಂದ ಶೆಲ್ಬಿ ರೋಜರ್ಸ್‌ ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು. ಇದು ಅವರಿಗೆ ವೃತ್ತಿಜೀವನದ ಮೂರನೇ ಫೈನಲ್‌ ಪ್ರವೇಶ.

116 ಕ್ರಮಾಂಕದ ದಕ್ಷಿಣ ಕರೊಲಿನಾದ ರೋಜರ್ಸ್‌ ಅವರು ಎಂಟರಘಟ್ಟದ ಪಂದ್ಯದಲ್ಲಿ ಶುಕ್ರವಾರ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಅವರಿಗೆ ಆಘಾತ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.