ADVERTISEMENT

ಕೋವಿಡ್‌ ಸೋಂಕು: ಫ್ರೆಂಚ್‌ ಓಪನ್‌ ಟೆನಿಸ್‌ ಅರ್ಹತಾ ಸುತ್ತಿನಿಂದ ಐವರು ಹೊರಕ್ಕೆ

ಏಜೆನ್ಸೀಸ್
Published 21 ಸೆಪ್ಟೆಂಬರ್ 2020, 13:24 IST
Last Updated 21 ಸೆಪ್ಟೆಂಬರ್ 2020, 13:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಅರ್ಹತಾ ಸುತ್ತಿನಲ್ಲಿ ಆಡಲಿದ್ದ ಇಬ್ಬರು ಆಟಗಾರರಲ್ಲಿ ಕೋವಿಡ್–19 ಸೋಂಕು ದೃಢಪಟ್ಟಿದೆ ಎಂದು ಫ್ರೆಂಚ್‌ ಟೆನಿಸ್‌ ಫೆಡರೇಷನ್ (ಎಫ್‌ಎಫ್‌ಟಿ)‌ ಹೇಳಿದೆ. ಒಬ್ಬ ತರಬೇತುದಾರನಿಗೂ ಸೋಂಕು ತಗುಲಿದ್ದು, ಅವರೊಂದಿಗೆ ಮೂವರು ಆಟಗಾರರು ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರೆಂದು ಫೆಡರೇಷನ್ ತಿಳಿಸಿದೆ.

ಈ ಐದು ಆಟಗಾರರು ಏಳು ದಿನಗಳ ಪ್ರತ್ಯೇಕವಾಸದಲ್ಲಿರಲಿದ್ದಾರೆ. ಅರ್ಹತಾ ಸುತ್ತಿನ ಪಂದ್ಯಗಳುಸೋಮವಾರ ಆರಂಭವಾಗಿದ್ದು, ಈ ಐವರು ಪಾಲ್ಗೊಳ್ಳುವುದಿಲ್ಲ ಎಂದು ಎಫ್‌ಎಫ್‌ಟಿ ಭಾನುವಾರ ಮಾಹಿತಿ ನೀಡಿದೆ. ಇದೇ 27ರಿಂದ ಫ್ರೆಂಚ್‌ ಓಪನ್‌ ಟೂರ್ನಿಯ ಪ್ರಧಾನ ಸುತ್ತಿನ ಪಂದ್ಯಗಳು ನಡೆಯಲಿವೆ.

ಕೋವಿಡ್‌ ಸೋಂಕಿತರ ಹೆಸರನ್ನು ಎಫ್‌ಎಫ್‌ಟಿ ಬಹಿರಂಗಪಡಿಸಿಲ್ಲ. ಆದರೆ ಕೋಚ್‌ ಪೀಟರ್‌ ಪೊಪೊವಿಚ್‌ ಹಾಗೂ 114ನೇ ಕ್ರಮಾಂಕದ ಆಟಗಾರ ಡಾಮಿರ್ ಡಿಜುಮರ್‌ ಅವರು ಸೋಂಕಿತರಲ್ಲಿ ಸೇರಿದ್ದಾರೆ ಎಂದು ಕ್ರೀಡಾ ವೆಬ್‌ಸೈಟ್‌ವೊಂದು ವರದಿ ಮಾಡಿದೆ.

ADVERTISEMENT

ಗುರುವಾರದವರೆಗೆ ಅಂದಾಜು 900 ಕೊರೊನಾ ವೈರಸ್‌ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಎಫ್‌ಎಫ್‌ಟಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.