ADVERTISEMENT

ಫೆಡರರ್‌, ಸೆರೆನಾ ವಿಲಿಯಮ್ಸ್‌ಗೆ ಜಯ

ವಿಂಬಲ್ಡನ್‌ ಟೂರ್ನಿ: ಅಮೆರಿಕದ ಆಟಗಾರ್ತಿ ಸ್ಟೀಫನ್ಸ್‌ಗೆ ಸೋಲುಣಿಸಿದ ಡೊನ್ನಾ ವೆಕಿಕ್‌

ಏಜೆನ್ಸೀಸ್
Published 2 ಜುಲೈ 2018, 20:09 IST
Last Updated 2 ಜುಲೈ 2018, 20:09 IST
ಸ್ಲಾನೆ ಸ್ಟೀಫನ್ಸ್ ಎದುರಿನ ಪಂದ್ಯದಲ್ಲಿ ಚೆಂಡನ್ನು ರಿಟರ್ನ್‌ ಮಾಡಿದ ಡೋನಾ ವೆಕಿಕ್‌ -ರಾಯಿಟರ್ಸ್ ಚಿತ್ರ
ಸ್ಲಾನೆ ಸ್ಟೀಫನ್ಸ್ ಎದುರಿನ ಪಂದ್ಯದಲ್ಲಿ ಚೆಂಡನ್ನು ರಿಟರ್ನ್‌ ಮಾಡಿದ ಡೋನಾ ವೆಕಿಕ್‌ -ರಾಯಿಟರ್ಸ್ ಚಿತ್ರ   

ಲಂಡನ್‌: ಎಂಟು ಬಾರಿಯ ಚಾಂಪಿಯನ್‌ ರೋಜರ್ ಫೆಡರರ್ ಮತ್ತು ಏಳು ಬಾರಿ ಪ್ರಶಸ್ತಿ ಗೆದ್ದ ಸೆರೆನಾ ವಿಲಿಯಮ್ಸ್‌ ವಿಂಬಲ್ಡನ್ ಟೆನಿಸ್ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದರು. ಆಲ್‌ ಇಂಗ್ಲೆಂಡ್ ಕ್ಲಬ್‌ನ ಅಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಫೆಡರರ್‌ 6–1, 6–3, 6–4ರಿಂದ ಸರ್ಬಿಯಾದ ದುಸಾನ್ ಲಜೊವಿಚ್ ಅವರನ್ನು ಮಣಿಸಿದರೆ ಸೆರೆನಾ 7–5, 6–3ರಿಂದ ಹಾಲೆಂಡ್‌ನ ಅರಾಂಕ್ಸಾ ರೂಸ್ ಅವರನ್ನು ಸೋಲಿ ಸಿದರು.

ಸ್ಟೀಫನ್ಸ್‌ಗೆ ಆಘಾತ: ಅಮೆರಿಕದ ಸ್ಲಾನೆ ಸ್ಟೀಫನ್ಸ್ ಅವರನ್ನು 6–1, 6–3ರಿಂದ ಮಣಿಸಿದ ಕ್ರೊವೇಷ್ಯಾದ ಡೊನ್ನಾ ವೆಕಿಕ್‌ ಎರಡನೇ ಸುತ್ತು ಪ್ರವೇಶಿಸಿದರು. ಮಹಿಳೆಯರ ವಿಭಾಗ ದಲ್ಲಿ ಅಮೆರಿಕಾದ ವಿಕ್ಟೋ ರಿಯಾ ಅಜರೆಂಕಾ, ರಷ್ಯಾದ ಎಕ ಟೆರಿನಾ ಅಲೆಕ್ಸಾಂಡ್ರೊವಾ ಅವರನ್ನು 7–6 (7/4), 6–3ರಿಂದ ಮಣಿಸಿದರು.

ಪುರುಷರ ವಿಭಾಗದಲ್ಲಿ ಮರಿನ್ ಸಿಲಿಕ್‌, ಯೋಶಿಹಿಟಿ ನಿಶಿಯೋಕ ಅವರನ್ನು 6–1, 6–4, 6–4ರಿಂದ ಸೋಲಿಸಿದರು. ಇವೊ ಕಾರ್ಲೊವಿಚ್‌, 4–6, 7–5, 7–6(9/7), 6–3ರಿಂದ ಮಿಕಾಯೆಲ್ ಯೂಜ್ನಿ ವಿರುದ್ಧ ಗೆದ್ದರು. ಡ್ಯಾನಿ್‌ ಮೆಡೆವೆವ್‌ 7–6 (8/6), 6–2, 6–2ರಿಂದ ಬೋರ್ನಾ ಕೊರಿಕ್ ಅವರನ್ನು ಸೋಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.