ಸುಮಿತ್ ನಗಾಲ್
ಪ್ಯಾರಿಸ್: ಭಾರತದ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಅರ್ಹತಾ ಸುತ್ತಿನಿಂದ ಬುಧವಾರ ಹೊರಬಿದ್ದರು. ಅವರು ತಮಗಿಂತ ಕೆಳಕ್ರಮಾಂಕದ ಆಟಗಾರ ಜುರಿಜ್ ರೊಡಿಯೊನೊವ್ ಎದುರು 2–6, 4–6 ರಲ್ಲಿ ನೇರ ಸೆಟ್‌ಗಳ ಸೋಲನುಭವಿಸಿದರು.
ವಿಶ್ವ ಕ್ರಮಾಂಕದಲ್ಲಿ 170ನೇ ಸ್ಥಾನದಲ್ಲಿರುವ ನಗಾಲ್, ಆಸ್ಟ್ರಿಯಾದ ಸ್ಪರ್ಧಿ, 225ನೇ ಕ್ರಮಾಂಕದ ಜುರಿಜ್ ಎದುರು ರೋಲಂಡ್ ಗ್ಯಾರೋಸ್‌ನಲ್ಲಿ ಸುಮಾರು ಒಂದೂವರೆ ಗಂಟೆಗಳ ಸೆಣಸಾಟದ ನಂತರ ಹೊರಬಿದ್ದರು. ಭಾರತದ ಆಟಗಾರ ಮೊದಲ ಸುತ್ತಿನಲ್ಲಿ ಅಮೆರಿಕದ ಮಿಚೆಲ್ ಕ್ರೂಜರ್ ಅವರನ್ನು ಸೋಲಿಸಿದ್ದರು.
ನಗಾಲ್, 2024ರಲ್ಲಿ ನಾಲ್ಕೂ ಗ್ರ್ಯಾನ್‌ಸ್ಲಾಮ್ ಟೂರ್ನಿಗಳ ಪ್ರಧಾನ ಸುತ್ತಿನಲ್ಲಿ ಆಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.