ADVERTISEMENT

ಟೆನಿಸ್ ಟೂರ್ನಿ: ಕಾರ್ತಿಕ್‌ಗೆ ಆಘಾತ ನೀಡಿದ ಗೋವಿನ್‌

ಎಐಟಿಎ 18 ವರ್ಷದೊಳಗಿನವರ ರಾಷ್ಟ್ರೀಯ ರ‍್ಯಾಂಕಿಂಗ್ ಟೆನಿಸ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 16:54 IST
Last Updated 9 ಮಾರ್ಚ್ 2021, 16:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಮೂರನೇ ಶ್ರೇಯಾಂಕದ ಕಾರ್ತಿಕ್‌ ಎಸ್‌.ಕೆವಿನ್‌ಗೆ ಆಘಾತ ನೀಡಿದ ಕರ್ನಾಟಕದ ಗೋವಿನ್‌ ಸೆಹ್ವಾಗ್‌ ಎಐಟಿಎ 18 ವರ್ಷದೊಳಗಿನವರ ರಾಷ್ಟ್ರೀಯ ರ‍್ಯಾಂಕಿಂಗ್ ಟೆನಿಸ್ ಟೂರ್ನಿ ಎಂಟರಘಟ್ಟಕ್ಕೆ ಲಗ್ಗೆಯಿಟ್ಟರು. ಇಲ್ಲಿಯ ಟಾಪ್‌ಸ್ಪಿನ್ ಟೆನಿಸ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಮಂಗಳವಾರ ಅವರು 6–0, 7–6ರಿಂದ ತಮಿಳುನಾಡು ಆಟಗಾರನನ್ನು ಮಣಿಸಿದರು.

ಕರ್ನಾಟಕದ ಮತ್ತೊಬ್ಬ ಆಟಗಾರ ಆಕರ್ಷ್‌ ಗಾಂವಕರ್‌ 6-2, 6-2ರಿಂದ ಅಸ್ಸಾಂ ಆಟಗಾರ, ಏಳನೇ ಶ್ರೇಯಾಂಕದ ಮನನ್‌ ನಾಥ್ ಅವರನ್ನು ಪರಾಭವಗೊಳಿಸಿ ಕ್ವಾರ್ಟರ್‌ಫೈನಲ್ ತಲುಪಿದರು.

ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದ ಆಟಗಾರ್ತಿ ಸೌಮ್ಯಾ ರೋನಡೆ, ಬಾಲಕಿಯರ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ 6–4, 6–0ರಿಂದ ಸಿರಿ ಪಾಟೀಲ್ ಅವರನ್ನು ಸೋಲಿಸಿದರು.

ADVERTISEMENT

ಬಾಲಕರ ಪ್ರೀಕ್ವಾರ್ಟರ್‌ಫೈನಲ್ ಇತರ ಪಂದ್ಯಗಳಲ್ಲಿ ಸ್ಕಂದ ಪ್ರಸನ್ನರಾವ್‌ 6-2, 6-2ರಿಂದ ರಕ್ಷಕ್ ತರುಣ್ ಎದುರು, ರಿಷಿವರ್ಧನ್‌ 6-2, 6-1ರಿಂದ ಶಂತನು ನಂಬಿಯಾರ್ ಎದುರು, ಅದಿತ್ ಅಮರನಾಥ್‌ 6-2, 6-2ರಿಂದ ಕ್ರಿಶ್ ಅಜಯ್ ತ್ಯಾಗಿ ವಿರುದ್ಧ, ರೇತಿನ್ ಪ್ರಣವ್‌ 6-3, 6-1ರಿಂದ ಭುವನ್ ಪ್ರಕಾಶ್ ಎದುರು, ಅರ್ಜುನ್ ಪ್ರೇಮಕುಮಾರ್‌ 6-7, 6-4, 6-2ರಿಂದ ಅನೂಪ್ ಕೃಷ್ಣಮೂರ್ತಿ ವಿರುದ್ಧ ಗೆದ್ದರು.

ಬಾಲಕಿಯರ ವಿಭಾಗದ ಪ್ರೀಕ್ವಾರ್ಟರ್‌ಫೈನಲ್ ಇತರ ಹಣಾಹಣಿಗಳಲ್ಲಿ ಅಮೋದಿನಿ ನಾಯಕ್‌ 6-1, 6-2ರಿಂದ ಚಾರ್ಮಿ ಗೋಪಿನಾಥ್ ಎದುರು, ಆತ್ಮಿಕಾ ಚೈತನ್ಯ ಶ್ರೀನಿವಾಸ್‌ 7-6 , 5-7, 6-3ರಿಂದ ಸಂಜನಾ ಮೂಲಾ ವಿರುದ್ಧ, ಕಶೀಶ್ ಕಾಂತ್ 6-2, 6-4ರಿಂದ ಸೋನಿಕಾ ಜಗದೀಶ್ ವಿರುದ್ಧ, ನಿಧಿ ಬಿ. ಶ್ರೀನಿವಾಸ್ 7-5, 6-3ರಿಂದ ಗಗನಾ ಮೋಹನ್ ಕುಮಾರ್‌ ಎದುರು, ಭಾರತೀಯಾನಾ ಬಾಬು ರೆಡ್ಡಿ 6-1, 6-3ರಿಂದ ಕಾರ್ತಿಕಾ ಎದುರು, ಸಮೀಕ್ಷಾ ದಾಬಸ್‌ 6-7, 6-3, 6-0ರಿಂದ ಹರ್ಷಿಣಿ ನಾಗರಾಜ್ ಎದುರು ಜಯಿಸಿ ಮುನ್ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.