ADVERTISEMENT

ಬಲವಂತದ ರಜೆಯ ಸದುಪಯೋಗ: ಉದ್ಯಮದಲ್ಲಿ ಟೆನಿಸ್ ಆಟಗಾರರು ಬ್ಯುಸಿ

ಕೊರೊನಾ ಪರಿಣಾಮ: ಹಲವು ಟೆನಿಸ್‌ ಟೂರ್ನಿಗಳು ರದ್ದು, ಮುಂದೂಡಿಕೆ

ಪಿಟಿಐ
Published 22 ಮಾರ್ಚ್ 2020, 6:36 IST
Last Updated 22 ಮಾರ್ಚ್ 2020, 6:36 IST
ಜೀವನ್‌ ನೆಡುಂಚೇರಿಯನ್‌
ಜೀವನ್‌ ನೆಡುಂಚೇರಿಯನ್‌   

ನವದೆಹಲಿ: ಕೊರೊನಾ ವೈರಸ್‌ ಸೋಂಕಿನ ಕಾರಣ ವಿವಿಧ ಟೆನಿಸ್‌ ಟೂರ್ನಿಗಳು ರದ್ದಾಗಿವೆ ಅಥವಾ ಮುಂದೂಡಲ್ಪಟ್ಟಿವೆ. ಈ ವೇಳೆ ‘ಬಲವಂತದ ರಜೆ’ಯಲ್ಲಿರುವ ಭಾರತದ ಟೆನಿಸ್‌ ಆಟಗಾರರು ಖಾಲಿ ಕುಳಿತಿಲ್ಲ. ಆಟಕ್ಕೆ ಹೊರತಾದ ಕಾರ್ಯಗಳ ಮೂಲಕ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಐಟಿಎಫ್‌, ಡಬ್ಲ್ಯುಟಿಎ ಹಾಗೂ ಎಟಿಪಿ ಟೂರ್ನಿಗಳು ರದ್ದಾಗಿವೆ. ಮೇ ತಿಂಗಳಲ್ಲಿ ನಿಗದಿಯಾಗಿದ್ದ ಫ್ರೆಂಚ್‌ ಓಪನ್‌ ಕೂಡ ಸೆಪ್ಟೆಂಬರ್‌–ಅಕ್ಟೋಬರ್‌ಗೆ ಆಯೋಜನೆಯಾಗಿದೆ.

ಇತ್ತೀಚೆಗಷ್ಟೇ ಡೇವಿಸ್ ಕಪ್ ಟೂರ್ನಿಗೆ ಪದಾರ್ಪಣೆ ಮಾಡಿರುವ ತಮಿಳುನಾಡು ಮೂಲದ ಜೀವನ್‌ ನೆಡುಂಚೆರಿಯನ್‌, ಸದ್ಯ ಪುದುಚೇರಿಯಲ್ಲಿರುವ ತಮ್ಮ ಕುಟುಂಬಕ್ಕೆ ಸೇರಿದ ರೆಸಾರ್ಟ್‌ (ಕೆ ರೆಸಾರ್ಟ್‌) ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಮನೆಯಲ್ಲೇ ವ್ಯಾಯಾಮ, ಫಿಟ್‌ನೆಸ್‌ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

ADVERTISEMENT

ಮುಂಬೈನ ಪುರವ್‌ ರಾಜ ಕೂಡ ‘ರಿಸ್ಟ್ರಂಗ್‌ ಇಂಡಿಯಾ’ ಹೆಸರಿನ ಟೆನಿಸ್‌ ರಾಕೆಟ್‌ ತಯಾರಿಕಾ’ ವ್ಯವಹಾರ ಆರಂಭಿಸಿದ್ದಾರೆ. ಇದರಲ್ಲಿ ಜರ್ಮನಿಯ ಪರಿಣತನೊಬ್ಬನ ಸಹಾಯವನ್ನು ಅವರು ಪಡೆದಿದ್ದಾರಂತೆ.

ಮಹಿಳಾ ಸಿಂಗಲ್ಸ್‌ ವಿಭಾಗದ ಪ್ರಮುಖ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಅಂಕಿತಾ ರೈನಾ ಅವರು ಪುಸ್ತಕ ಓದು, ಅಡುಗೆ, ಪಂದ್ಯಗಳ ವೀಕ್ಷಣೆ, ಯೋಗ ಮತ್ತಿತರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.