ADVERTISEMENT

ಸೆಮಿಫೈನಲ್‌ಗೆ ಕಾಶ್ವಿ ಸುನಿಲ್‌

ಎಐಟಿಎ 14 ವರ್ಷದೊಳಗಿನವರ ಟೆನಿಸ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 16:02 IST
Last Updated 7 ಏಪ್ರಿಲ್ 2021, 16:02 IST
ಕಾಶ್ವಿ ಸುನಿಲ್ ಆಟದ ವೈಖರಿ
ಕಾಶ್ವಿ ಸುನಿಲ್ ಆಟದ ವೈಖರಿ   

ಬೆಂಗಳೂರು: ಎರಡನೇ ಶ್ರೇಯಾಂಕದ ಜೈನಾ ಅಂಬರ್ ಸಾಲಾರ್ ಅವರಿಗೆ ಸೋಲುಣಿಸಿದ ಕಾಶ್ವಿ ಸುನಿಲ್, ಎಐಟಿಎ 14 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದರು.

ಇಲ್ಲಿಯ ಟಾಪ್‌ಸ್ಪಿನ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕಿಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಕಾಶ್ವಿ 4–6, 7–5, 6–3ರಿಂದ ಜೈನಾ ಅವರನ್ನು ಮಣಿಸಿದರು. ಕಾಶ್ವಿ ಅವರು ಇಲ್ಲಿ ಏಳನೇ ಶ್ರೇಯಾಂಕ ಪಡೆದಿದ್ದಾರೆ.

ಬಾಲಕಿರ ವಿಭಾಗದ ಎಂಟರಘಟ್ಟದ ಇನ್ನುಳಿದ ಪಂದ್ಯಗಳಲ್ಲಿ ಅನ್ವಿ ಪುನಗಂಟಿ 6-4, 7-6ರಿಂದ ಸಂಗೀತಾ ರಾಮನ್ ಎದುರು, ಉಮಾಮ್‌ ಅಹಮದ್‌ 4-6, 6-2, 7-5ರಿಂದ ಸಾನ್ವಿ ಮಿಶ್ರಾ ಎದುರು, ಶ್ರೀ ತನ್ವಿ 6-1, 6-2ರಿಂದ ಶ್ರೇಯಾಂಶಿ ಘವಾರೆ ಎದುರು ಜಯಿಸಿದರು.

ADVERTISEMENT

ಬಾಲಕರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ತನುಷ್‌ ಜಿ. 6-2, 6-2ರಿಂದ ಲೇತೀಶ್ ಕೆ. ವಿರುದ್ಧ, ಪ್ರಜ್ವಲ್ ಎಚ್‌. 4-6, 6-2, 6-3ರಿಂದ ಶಿವ ಪ್ರಶಾಂತ್‌ ವಿರುದ್ಧ, ಆರಾಧ್ಯ ಕ್ಷಿತಿಜ್‌ 6-0, 6-3ರಿಂದ ವಿಜಯ್ ಸುಮುಖ್‌ ಎದುರು, ಆರಾಧ್ಯ ದ್ವಿವೇದಿ 6-2, 6-2ರಿಂದ ಆದಿತ್ಯ ನಾರಾಯಣ್ ಎದುರು ಗೆದ್ದು ನಾಲ್ಕರ ಘಟ್ಟ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.