ADVERTISEMENT

ಲೇವರ್‌ ಕಪ್‌ ಟೆನಿಸ್‌: ಯುರೋಪ್‌ಗೆ ಹ್ಯಾಟ್ರಿಕ್‌ ಪ್ರಶಸ್ತಿ

ಏಜೆನ್ಸೀಸ್
Published 23 ಸೆಪ್ಟೆಂಬರ್ 2019, 12:55 IST
Last Updated 23 ಸೆಪ್ಟೆಂಬರ್ 2019, 12:55 IST
ಯುರೋಪ್‌ ತಂಡದ ಆಟಗಾರರಾದ (ಮೊದಲ ಸಾಲು; ಎಡದಿಂದ) ಅಲೆಕ್ಸಾಂಡರ್‌ ಜ್ವೆರೆವ್‌, ರಫೆಲ್‌ ನಡಾಲ್‌, ಫಾಬಿಯೊ ಫಾಗ್ನಿನಿ, ರೋಜರ್‌ ಫೆಡರರ್‌, (ಹಿಂದಿನ ಸಾಲು; ಬಲದಿಂದ) ಡಾಮಿನಿಕ್‌ ಥೀಮ್‌, ಸ್ಟೆಫಾನೊಸ್‌ ಸಿಸಿಪಸ್‌, ಆಟವಾಡದ ನಾಯಕರಾದ ಜೊರ್ನ್ ಬೊರ್ಗ್‌ ಹಾಗೂ ಥಾಮಸ್‌ ಎನ್‌ಕ್ವಿಸ್ಟ್‌ ಅವರು ಟ್ರೋಫಿಯೊಂದಿಗೆ ಸಂಭ್ರಮಿಸಿದರು–ಎಎಫ್‌ಪಿ ಚಿತ್ರ
ಯುರೋಪ್‌ ತಂಡದ ಆಟಗಾರರಾದ (ಮೊದಲ ಸಾಲು; ಎಡದಿಂದ) ಅಲೆಕ್ಸಾಂಡರ್‌ ಜ್ವೆರೆವ್‌, ರಫೆಲ್‌ ನಡಾಲ್‌, ಫಾಬಿಯೊ ಫಾಗ್ನಿನಿ, ರೋಜರ್‌ ಫೆಡರರ್‌, (ಹಿಂದಿನ ಸಾಲು; ಬಲದಿಂದ) ಡಾಮಿನಿಕ್‌ ಥೀಮ್‌, ಸ್ಟೆಫಾನೊಸ್‌ ಸಿಸಿಪಸ್‌, ಆಟವಾಡದ ನಾಯಕರಾದ ಜೊರ್ನ್ ಬೊರ್ಗ್‌ ಹಾಗೂ ಥಾಮಸ್‌ ಎನ್‌ಕ್ವಿಸ್ಟ್‌ ಅವರು ಟ್ರೋಫಿಯೊಂದಿಗೆ ಸಂಭ್ರಮಿಸಿದರು–ಎಎಫ್‌ಪಿ ಚಿತ್ರ   

ಜಿನೆವಾ: ನಿರ್ಣಾಯಕ ಸಿಂಗಲ್ಸ್‌ನಲ್ಲಿ ಛಲದಿಂದ ಹೋರಾಡಿದ ಅಲೆಕ್ಸಾಂಡರ್‌ ಜ್ವೆರೆವ್‌, ಯುರೋಪ್‌ ತಂಡವು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.

ಜ್ವೆರೆವ್‌ ಅವರ ದಿಟ್ಟ ಆಟದಿಂದಾಗಿ ಯುರೋಪ್‌ ತಂಡ ಲೇವರ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ 13–11 ಪಾಯಿಂಟ್ಸ್‌ನಿಂದ ವಿಶ್ವ ತಂಡವನ್ನು ಮಣಿಸಿತು. ಇದರೊಂದಿಗೆ ‘ಹ್ಯಾಟ್ರಿಕ್‌’ ಪ್ರಶಸ್ತಿ ಗೆದ್ದ ಸಾಧನೆಯನ್ನು ಮಾಡಿತು.

2017 ಮತ್ತು 2018ರಲ್ಲೂ ಯುರೋಪ್‌ ಚಾಂಪಿಯನ್‌ ಆಗಿತ್ತು.

ADVERTISEMENT

ಎರಡನೇ ದಿನದ ಅಂತ್ಯಕ್ಕೆ 5–7ರಿಂದ ಹಿಂದಿದ್ದ ವಿಶ್ವ ತಂಡ ಅಂತಿಮ ದಿನವಾದ ಭಾನುವಾರ ಗುಣಮಟ್ಟದ ಸಾಮರ್ಥ್ಯ ತೋರಿತು.

ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಜಾನ್‌ ಇಸ್ನರ್‌ ಮತ್ತು ಜಾಕ್‌ ಸಾಕ್‌ 5–7, 6–4, 10–8ರಿಂದ ಯುರೋಪ್‌ ತಂಡದ ರೋಜರ್‌ ಫೆಡರರ್‌ ಮತ್ತು ಸ್ಟೆಫಾನೊಸ್‌ ಸಿಸಿಪಸ್‌ ಅವರನ್ನು ಸೋಲಿಸಿ ಮೂರು ಪಾಯಿಂಟ್ಸ್‌ ಕಲೆಹಾಕಿದರು.

ನಂತರ ನಡೆದ ಸಿಂಗಲ್ಸ್‌ನಲ್ಲಿ ಟೇಲರ್‌ ಫ್ರಿಟ್ಜ್‌ 7–5, 6–7, 10–5ರಲ್ಲಿ ಡಾಮಿನಿಕ್‌ ಥೀಮ್‌ಗೆ ಸೋಲುಣಿಸಿದ್ದರಿಂದ ವಿಶ್ವ ತಂಡ 11–7 ಮುನ್ನಡೆ ಪಡೆಯಿತು.

ಎರಡನೇ ಸಿಂಗಲ್ಸ್‌ನಲ್ಲಿ ರೋಜರ್‌ ಫೆಡರರ್‌ 6–4, 7–6ರಲ್ಲಿ ಜಾನ್‌ ಇಸ್ನರ್‌ ಅವರನ್ನು ಮಣಿಸಿ ಯುರೋಪ್‌ ತಂಡದ ಹಿನ್ನಡೆಯನ್ನು 10–11ಕ್ಕೆ ತಗ್ಗಿಸಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಸಿಂಗಲ್ಸ್‌ನಲ್ಲಿ ಜ್ವೆರೆವ್‌ 6–4, 3–6, 10–4ರಲ್ಲಿ ಮಿಲೊಸ್‌ ರಾನಿಕ್‌ ವಿರುದ್ಧ ಗೆದ್ದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.