ADVERTISEMENT

ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಲಿಯಾಂಡರ್‌ ಪೇಸ್‌ ದೋಷಿ: ಕೋರ್ಟ್‌ ತೀರ್ಪು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2022, 11:08 IST
Last Updated 25 ಫೆಬ್ರುವರಿ 2022, 11:08 IST
ಲಿಯಾಂಡರ್‌ ಪೇಸ್‌
ಲಿಯಾಂಡರ್‌ ಪೇಸ್‌   

ಮುಂಬೈ: ಕೌಟುಂಬಿಕ ದೌರ್ಜನ್ಯ ಹಾಗೂ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ತಪ್ಪಿತಸ್ಥರೆಂದು ಇಲ್ಲಿನ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ.

ಲಿಯಾಂಡರ್‌ ಪೇಸ್‌ ವಿರುದ್ಧ ಅವರ ಮಾಜಿ ಪ್ರೇಯಸಿ ಹಾಗೂ ರೂಪದರ್ಶಿ ರಿಯಾ ಪಿಳ್ಳೈ ಅವರು 2014ರಲ್ಲಿ ದೂರು ನೀಡಿದ್ದರು.

ಲಿಯಾಂಡರ್‌ ಪೇಸ್‌ ಅವರು ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ರಿಯಾ ಆರೋಪಿಸಿದ್ದರು.

ADVERTISEMENT

ಈ ಪ್ರಕರಣವನ್ನು ವಿಚಾರಣೆ ನಡೆಸಿದ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಲಿಯಾಂಡರ್‌ ಪೇಸ್‌ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ತೀರ್ಪು ನೀಡಿದೆ.

ತಮಗೆ ಹಂಚಿಕೆಯಾಗಿರುವ ನಿವಾಸವನ್ನು ತೊರೆಯಲು ರಿಯಾ ನಿರ್ಧರಿಸಿದರೆ, ಅವರಿಗೆ ಮಾಸಿಕ ನಿರ್ವಹಣೆಗಾಗಿ ₹1 ಲಕ್ಷ, ಮಾಸಿಕ ಬಾಡಿಗೆಗಾಗಿ ₹50,000 ಪಾವತಿಸಲು ಲಿಯಾಂಡರ್ ಪೇಸ್‌ಗೆ ನ್ಯಾಯಾಲಯ ಸೂಚಿಸಿದೆ.

ಸಹಜೀವನ (ಲಿವ್‌–ಇನ್‌ ಸಂಬಂಧ) ನಡೆಸುತ್ತಿದ್ದ ಪೇಸ್‌ ಮತ್ತು ರಿಯಾ ಸಂಬಂಧ ಮುರಿದು ಬಿದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.