ADVERTISEMENT

ಲೀಟನ್ ಹೆವಿಟ್‌ಗೆ 2 ವಾರ ಅಮಾನತು ಶಿಕ್ಷೆ

ಏಜೆನ್ಸೀಸ್
Published 10 ಸೆಪ್ಟೆಂಬರ್ 2025, 19:32 IST
Last Updated 10 ಸೆಪ್ಟೆಂಬರ್ 2025, 19:32 IST
   

ಲಂಡನ್: ಉದ್ದೀಪನ ಮದ್ದು ನಿಗ್ರಹ ದಳದ ಅಧಿಕಾರಿಯೊಬ್ಬರನ್ನು ದೂಡಿಹಾಕಿದ್ದಕ್ಕೆ ಎರಡು ಬಾರಿಯ ಗ್ರ್ಯಾಂಡ್‌ಸ್ಲಾಮ್‌ ಚಾಂಪಿಯನ್ ಲೀಟನ್ ಹೆವಿಟ್ ಅವರಿಗೆ ಎರಡು ವಾರ ಅಮಾನತು ಶಿಕ್ಷೆ ವಿಧಿಸಲಾಗಿದೆ.

ಸೆ. 25 ರಿಂದ ಅಕ್ಟೋಬರ್ 7ರವರೆಗೆಅನ್ವಯವಾಗುವಂತೆ ಅಮಾನತು ಜಾರಿಯಲ್ಲಿರಲಿದೆ ಎಂದು ಇಂಟರ್‌ನ್ಯಾಷನಲ್ ಟೆನಿಸ್‌ ಇಂಟೆಗ್ರಿಟಿ ಏಜನ್ಸಿ ತಿಳಿಸಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಡೇವಿಸ್ ಕಪ್ ಪಂದ್ಯದ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ, ಇಟಲಿಗೆ ಸೋತಿತ್ತು. ನಂತರ ಡೋಪಿಂಗ್ ತಂಡದ 60 ವರ್ಷ ವಯಸ್ಸಿನ ಸಿಬ್ಬಂದಿಯನ್ನು ದೂಡಿಹಾಕಿದ್ದರು. 44 ವರ್ಷ ವಯಸ್ಸಿಮ ಹೆವಿಟ್ ಇದನ್ನು ನಿರಾಕರಿಸಿದ್ದರು. ಆದರೆ ಸ್ವತಂತ್ರ ತನಿಖಾಸಂಸ್ಥೆಯಲ್ಲಿ ವಿಚಾರಣೆಯಲ್ಲಿ ಹೆವಿಟ್‌ ದುರ್ವರ್ತನೆ ಪ್ರದರ್ಶಿಸಿದ್ದು ದೃಢಪಟ್ಟಿತ್ತಿ.

ADVERTISEMENT

2001ರಲ್ಲಿ ಅಮೆರಿಕ ಓಪನ್‌, 2002ರಲ್ಲಿ ವಿಂಬಲ್ಡನ್‌ ಪ್ರಶಸ್ತಿ ಗೆದ್ದಿದ್ದ ಅವರಿಗೆ ಮೇಲ್ಮನವಿ ಸಲ್ಲಿಸಲು
ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.