ADVERTISEMENT

ವೊಲ್ವೊ ಕಾರ್ ಓಪನ್: ಪ್ರಶಸ್ತಿ ಗೆದ್ದ ವೆರೋನಿಕಾ

ಏಜೆನ್ಸೀಸ್
Published 12 ಏಪ್ರಿಲ್ 2021, 21:05 IST
Last Updated 12 ಏಪ್ರಿಲ್ 2021, 21:05 IST
ಟ್ರೋಫಿಯೊಂದಿಗೆ ವೆರೋನಿಕಾ ಕುದರ್ಮೆತೊವಾ–ಎಎಫ್‌ಪಿ ಚಿತ್ರ
ಟ್ರೋಫಿಯೊಂದಿಗೆ ವೆರೋನಿಕಾ ಕುದರ್ಮೆತೊವಾ–ಎಎಫ್‌ಪಿ ಚಿತ್ರ   

ಚಾರ್ಲ್‌ಸ್ಟನ್‌: ಅಮೋಘ ಆಟವಾಡಿದ ರಷ್ಯಾದ ವೆರೋನಿಕಾ ಕುದರ್ಮೆತೊವಾ, ವೊಲ್ವೊ ಕಾರ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಅವರು 6–4, 6–2ರಿಂದ ಮೊಂಟೆನೆಗ್ರೊದ ಡಂಕಾ ಕೊವಿನಿಚ್ ಅವರನ್ನು ಪರಾಭವಗೊಳಿಸಿದರು.

ವೆರೋನಿಕಾ ಅವರಿಗೆ ಇದು ಮೊದಲ ಡಬ್ಲ್ಯುಟಿಎ ಪ್ರಶಸ್ತಿ. ಟೂರ್ನಿಯ ಆರು ಪಂದ್ಯಗಳಲ್ಲಿ ಅವರು ಒಂದೂ ಸೆಟ್‌ ಕೈಚೆಲ್ಲದೆ ಪ್ರಶಸ್ತಿಗೆ ಮುತ್ತಿಟ್ಟರು. 2012ರಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ಈ ಸಾಧನೆ ಮಾಡಿದ್ದರು.

ಕೊರೊನಾ ವೈರಾಣುವಿನ ಹಾವಳಿಯ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕೆ ಪ್ರೇಕ್ಷಕರ ಪ್ರವೇಶ ಇರಲಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.