ADVERTISEMENT

ಶರಪೋವಾ ಗುಡ್‌ಬೈ

ಏಜೆನ್ಸೀಸ್
Published 26 ಫೆಬ್ರುವರಿ 2020, 20:30 IST
Last Updated 26 ಫೆಬ್ರುವರಿ 2020, 20:30 IST
ಮರಿಯಾ ಶರಪೋವಾ
ಮರಿಯಾ ಶರಪೋವಾ   

ಪ್ಯಾರಿಸ್: ಟೆನಿಸ್ ಲೋಕದ ‘ಬೆಡಗಿನ ತಾರೆ’ ಮರಿಯಾ ಶರಪೋವಾ ವೃತ್ತಿಪರ ಟೆನಿಸ್‌ಗೆ ಬುಧವಾರ ವಿದಾಯ ಘೋಷಿಸಿದ್ದಾರೆ.

2001ರಲ್ಲಿ ಪದಾರ್ಪಣೆ ಮಾಡಿದ್ದ ಅವರು ಐದು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ರಷ್ಯಾದ ಶರಪೋವಾ 2004ರಲ್ಲಿಯೇ ವಿಂಬಲ್ಡನ್ ಪ್ರಶಸ್ತಿ ಜಯಿಸಿ ದಾಖಲೆ ಬರೆದಿದ್ದರು. 2005 ಅಗ್ರಶ್ರೇಯಾಂಕ ಕೂಡ ಗಳಿಸಿದ್ದರು. 2012ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಆದರೆ, 2016ರಲ್ಲಿ ನಿಷೇಧಿತ ಮದ್ದು ಮೆಲ್ಡೊನಿಯಂ ಸೇವನೆ ಆರೋಪದಲ್ಲಿ ಒಂದು ವರ್ಷದ ನಿಷೇಧ ಶಿಕ್ಷೆ ಅನುಭವಿಸಿದ್ದರು. 2017ರಲ್ಲಿ ಕಣಕ್ಕೆ ಮರಳಿದ್ದ ಅವರು ಹೆಚ್ಚು ಸಫಲರಾಗಿರಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.