ADVERTISEMENT

ಪಂದ್ಯದಿಂದ ಹಿಂದೆ ಸರಿದ ಮರ‍್ರೆ

ಏಜೆನ್ಸೀಸ್
Published 28 ಜೂನ್ 2020, 15:14 IST
Last Updated 28 ಜೂನ್ 2020, 15:14 IST
ಆ್ಯಂಡಿ ಮರ‍್ರೆ
ಆ್ಯಂಡಿ ಮರ‍್ರೆ   

ಲಂಡನ್‌: ಬ್ರಿಟನ್‌ನ ಅನುಭವಿ ಟೆನಿಸ್‌ ಆಟಗಾರ ಆ್ಯಂಡಿ ಮರ‍್ರೆ ಅವರು ‘ಬ್ಯಾಟಲ್‌ ಆಫ್‌ ದಿ ಬ್ರಿಟ್ಸ್‌’ ಪ್ರದರ್ಶನ ಟೂರ್ನಿಯ ಪಂದ್ಯದಿಂದ ಹಿಂದೆ ಸರಿದಿದ್ದಾರೆ.

ಶನಿವಾರ ನಡೆದಿದ್ದ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪೈಪೋಟಿಯಲ್ಲಿ ಡ್ಯಾನ್‌ ಇವಾನ್ಸ್‌ ವಿರುದ್ಧ ಸೋತಿದ್ದ ಮರ‍್ರೆ, ಮೂರನೇ ಸ್ಥಾನದ ‘ಪ್ಲೇ ಆಫ್‌’ನಲ್ಲಿ ಕ್ಯಾಮ್‌ ನೂರಿ ಎದುರು ಸೆಣಸಬೇಕಿತ್ತು.

ಹೋದ ವರ್ಷದ ನವೆಂಬರ್‌ ಬಳಿಕ ಮೊದಲ ಬಾರಿಗೆ ಟೆನಿಸ್‌ ಅಂಗಳಕ್ಕಿಳಿದಿದ್ದ 33 ವರ್ಷ ವಯಸ್ಸಿನ ಮರ‍್ರೆ, ಹಿಂದಿನ ಐದು ದಿನಗಳಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದರು.ಗಾಯಗೊಳ್ಳಬಹುದೆಂಬ ಆತಂಕದಿಂದಾಗಿ ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯದಿರಲು ನಿರ್ಧರಿಸಿದ್ದಾರೆ.

ADVERTISEMENT

‘ಮರ‍್ರೆ, ಪಂದ್ಯದಿಂದ ಹಿಂದೆ ಸರಿದಿರುವ ಕಾರಣ ಜೇಮ್ಸ್‌ ವಾರ್ಡ್‌ ಮತ್ತು ನೂರಿ ಅವರು ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ’ ಎಂದು ಲಾನ್‌ ಟೆನಿಸ್‌ ಸಂಸ್ಥೆ ಟ್ವೀಟ್‌ ಮಾಡಿದೆ.

ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಇವಾನ್ಸ್‌ ಹಾಗೂ ಕೈಲ್‌ ಎಡ್ಮಂಡ್‌ ಅವರು ಮುಖಾಮುಖಿಯಾಗಲಿದ್ದಾರೆ.

ಗ್ರ್ಯಾನ್‌ಸ್ಲಾಮ್‌ನಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿರುವ ಮರ‍್ರೆ, ಆಗಸ್ಟ್‌ನಲ್ಲಿ ವಾಷಿಂಗ್ಟನ್‌ನಲ್ಲಿ ನಡೆಯುವ ಸಿಟಿ ಓಪನ್‌ನಲ್ಲಿ ಆಡುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.