ADVERTISEMENT

ಡೇವಿಸ್‌ ಕಪ್‌ ಕಣಕ್ಕೆ ನಡಾಲ್‌

ಏಜೆನ್ಸೀಸ್
Published 22 ಅಕ್ಟೋಬರ್ 2019, 2:34 IST
Last Updated 22 ಅಕ್ಟೋಬರ್ 2019, 2:34 IST
ರಫೆಲ್‌ ನಡಾಲ್–ಎಎಫ್‌ಪಿ ಚಿತ್ರ
ರಫೆಲ್‌ ನಡಾಲ್–ಎಎಫ್‌ಪಿ ಚಿತ್ರ   

ಮ್ಯಾಡ್ರಿಡ್‌: ವಿಶ್ವದ ಎರಡನೇ ರ‍್ಯಾಂಕಿನ ಆಟಗಾರ ರಫೆಲ್‌ ನಡಾಲ್‌, ಸ್ಪೇನ್‌ನ ಡೇವಿಸ್‌ ಕಪ್‌ ಟೆನಿಸ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಂದಿನ ತಿಂಗಳು ಮ್ಯಾಡ್ರಿಡ್‌ನಲ್ಲಿ ಟೂರ್ನಿ ನಡೆಯಲಿದೆ.

ನಡಾಲ್‌ ಜೊತೆಗೆ ರಾಬರ್ಟೊ ಬೌಟಿಸ್ಟಾ ಅಗುಟ್‌, ಪ್ಯಾಬ್ಲೊ ಕ್ಯಾರೆನೊ, ಫೆಲಿಸಿಯಾನೊ ಲೊಪೆಜ್‌ ಮತ್ತು ಮಾರ್ಸೆಲ್‌ ಗ್ರ್ಯಾನೊಲರ್ಸ್ ಕೂಡ ತಂಡದಲ್ಲಿದ್ದಾರೆ. ಸೆರ್ಜಿ ಬ್ರುಕ್ವೆರಾ‌ಈ ತಂಡದ ಕೋಚ್‌.

ಮಣಿಕಟ್ಟು ಗಾಯದ ಕಾರಣ ನಡಾಲ್‌ ಅವರು ಶಾಂಘೈ ಮಾಸ್ಟರ್ಸ್ ಟೂರ್ನಿಯಲ್ಲಿ ಆಡಿರಲಿಲ್ಲ.

ADVERTISEMENT

ಡೇವಿಸ್‌ ಕಪ್‌ ಟೂರ್ನಿಯಲ್ಲಿ ಸ್ಪೇನ್‌ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ರಷ್ಯಾ ಹಾಗೂ ಕ್ರೊವೇಷ್ಯಾ ಕೂಡ ಇದೇ ಗುಂಪಿನಲ್ಲಿವೆ. ಟೂರ್ನಿಯು ನವಂಬರ್‌ 18ರಿಂದ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.