ADVERTISEMENT

ಸೆಮಿಫೈನಲ್‌ಗೆ ನಡಾಲ್

ಇಟಾಲಿಯನ್‌ ಓಪನ್‌ ಟೆನಿಸ್‌: ನಿಶಿಕೋರಿಗೆ ಸೋಲು

​ಪ್ರಜಾವಾಣಿ ವಾರ್ತೆ
Published 17 ಮೇ 2019, 19:44 IST
Last Updated 17 ಮೇ 2019, 19:44 IST
ಗಾಯಗೊಂಡು ಹೊರ ನಡೆದ ರೋಜರ್‌ ಫೆಡರರ್‌ –ಎಎಫ್‌ಪಿ ಚಿತ್ರ
ಗಾಯಗೊಂಡು ಹೊರ ನಡೆದ ರೋಜರ್‌ ಫೆಡರರ್‌ –ಎಎಫ್‌ಪಿ ಚಿತ್ರ   

ರೋಮ್‌ (ಎಎಫ್‌ಪಿ): ಸ್ವಿಸ್‌ ದಿಗ್ಗಜ ಆಟಗಾರ ರೋಜರ್‌ ಫೆಡರರ್‌ ಹಾಗೂ ವಿಶ್ವ ಕ್ರಮಾಂಕ ಪಟ್ಟಿಯಲ್ಲಿಅಗ್ರಸ್ಥಾನದಲ್ಲಿರುವ ನವೊಮಿ ಒಸಾಕಾ ಅವರು ಗಾಯದ ಕಾರಣದಿಂದ ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಿಂದ ಹೊರಗುಳಿದಿದ್ದಾರೆ. ಕ್ವಾರ್ಟರ್‌ಫೈನಲ್‌ ಪಂದ್ಯಗಳನ್ನು ಆಡಬೇಕಿದ್ದ ಇವರು ಶುಕ್ರವಾರ ಹಿಂದೆ ಸರಿದರು.

ಗ್ರೀಕ್‌ ಸಿಸಿಪಸ್‌ ಅವರನ್ನು ಎದುರಿಸಬೇಕಿದ್ದ ಫೆಡರರ್‌ ಅವರನ್ನು ಬಲಗಾಲು ನೋವು ಬಾಧಿಸಿತು.

ಇದರಿಂದ ಸಿಸಿಪಸ್‌ ಅವರು ಸುಲಭವಾಗಿ ಸೆಮಿಫೈನಲ್‌ ತಲುಪಿದ್ದಾರೆ. ರಫೆಲ್‌ ನಡಾಲ್‌ ಅವರನ್ನು ಸೆಮಿಯಲ್ಲಿ ಎದುರಿಸಲಿದ್ದಾರೆ.

ADVERTISEMENT

ಕ್ವಾರ್ಟರ್‌ಫೈನಲ್‌ನಲ್ಲಿ ಮ್ಯಾಡ್ರಿಡ್‌ ಓಪನ್‌ ಚಾಂಪಿಯನ್‌ ಕಿಕಿ ಬೆರ್ಟೆನ್ಸ್‌ ಅವರನ್ನು ಎದುರಿಸಬೇಕಿದ್ದ ಜಪಾನ್‌ನ ನವೊಮಿ ಒಸಾಕಾ ಅವರು ಕೈ ನೋವಿನ ಕಾರಣ ಟೂರ್ನಿಯಿಂದ ಹಿಂದೆ ಸರಿದರು.

ಜಪಾನ್‌ನ ನಿಶಿಕೋರಿ ಅವರಿಗೆ 6–4, 6–2 ಸೆಟ್‌ಗಳಿಂದ ಸೋಲುಣಿಸಿದ ಅರ್ಜೆಂಟೀನಾದ ಡಿಗೊ ಸ್ವಾಜ್ಮನ್‌ ಅವರು ಟೂರ್ನಿಯಲ್ಲಿ ಮೊದಲಿಗರಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

ನಡಾಲ್‌ ಸೆಮಿಫೈನಲ್‌ಗೆ: ಫರ್ನಾಂಡೊ ವೆರ್ಡಾಸ್ಕೊ ಅವರನ್ನು 6–4, 6–0 ಸೆಟ್‌ಗಳಿಂದ ಮಣಿಸಿದ ಸ್ಪೇನ್‌ನ ರಫೆಲ್‌ ನಡಾಲ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಅವರು ತಮ್ಮ ಮುಂದಿನ ಪಂದ್ಯದಲ್ಲಿ ಗ್ರೀಸ್‌ನ ಸಿಸಿಪಸ್‌ ಅವರನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.