ADVERTISEMENT

ಈ ಋತುವಿನಲ್ಲಿ ಆಡಲಾಗುವುದಿಲ್ಲ ಎಂದುಕೊಂಡಿದ್ದೆ: ರಫೆಲ್‌ ನಡಾಲ್‌

ಗಾಯದಿಂದ ಬಳಲಿದ್ದ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಚಾಂಪಿಯನ್‌ ರಫೆಲ್‌ ನಡಾಲ್‌

ರಾಯಿಟರ್ಸ್
Published 12 ಜೂನ್ 2019, 17:41 IST
Last Updated 12 ಜೂನ್ 2019, 17:41 IST
ರಫೆಲ್‌ ನಡಾಲ್‌– ಎಎಫ್‌ಪಿ ಚಿತ್ರ
ರಫೆಲ್‌ ನಡಾಲ್‌– ಎಎಫ್‌ಪಿ ಚಿತ್ರ   

ಪ್ಯಾರಿಸ್‌: ಗಾಯದ ಕಾರಣ ಇಂಡಿಯನ್‌ ವೆಲ್ಸ್‌ ಟೂರ್ನಿಯಿಂದ ಹಿಂದೆ ಸರಿದಿದ್ದ ವೇಳೆ ಈ ಋತುವಿನಲ್ಲಿ ಟೆನಿಸ್‌ ಆಡಲಾಗುವುದಿಲ್ಲ ಎಂದು ತಿಳಿದಿದ್ದೆ ಎಂದು ಫ್ರೆಂಚ್‌ ಓಪನ್‌ ಪ್ರಶಸ್ತಿ ವಿಜೇತ ರಫೆಲ್‌ ನಡಾಲ್‌ ಹೇಳಿದ್ದಾರೆ.

ಮೊಣಕಾಲು ನೋವಿನ ಹಿನ್ನೆಲೆಯಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ನಡೆದಿದ್ದ ಇಂಡಿಯನ್ಸ್ ವೆಲ್ಸ್ ಟೂರ್ನಿಯ ಸೆಮಿಫೈನಲ್ಸ್‌ನಿಂದ ನಡಾಲ್‌ ಹಿಂದೆ ಸರಿದ್ದಿದ್ದರು. ಆದರೂ ನೋವಿನೊಂದಿಗೆ ಫ್ರೆಂಚ್‌ ಓಪನ್‌ ಟೂರ್ನಿ ಆಡಿದ್ದ ಸ್ಪೇನ್‌ನ ಪರಿಣತ ಆಟಗಾರ 12ನೇ ಬಾರಿ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

’ಇಂಡಿಯನ್ಸ್‌ ವೆಲ್ಸ್‌ ಟೂರ್ನಿಯ ಬಳಿಕ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ನನ್ನ ದೇಹ ಚೇತರಿಸಿಕೊಳ್ಳದಿದ್ದರೆ ಈ ವರ್ಷ ಆಡಲೇಬಾರದು ಎಂದು ನಿರ್ಧರಿಸಿದ್ದೆ.ಇಲ್ಲದಿದ್ದರೆ ನೋವಿನ ಮಧ್ಯಯೇ ಆಡುವುದು ನನ್ನ ಮತ್ತೊಂದು ಆಯ್ಕೆಯಾಗಿತ್ತು’ ಎಂದು ನಡಾಲ್‌ ಹೇಳಿದರು.

ADVERTISEMENT

ಜುಲೈ 1ರಂದು ಆರಂಭವಾಗುವ ವಿಂಬಲ್ಡನ್ ಟೂರ್ನಿಯ ತನಕ ಯಾವುದೇ ಪಂದ್ಯವಾಡದಿರಲು ರಫೆಲ್‌ ನಡಾಲ್‌ ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.