ADVERTISEMENT

ನಗಾಲ್‌ಗೆ ಚಾಲೆಂಜರ್‌ ಟೆನಿಸ್‌ ಟೂರ್ನಿ ಪ್ರಶಸ್ತಿ

ಬ್ಯೂನೊ ಏರ್ಸ್‌ನಲ್ಲಿ ನಡೆದ ಟೂರ್ನಿ

ಪಿಟಿಐ
Published 30 ಸೆಪ್ಟೆಂಬರ್ 2019, 19:30 IST
Last Updated 30 ಸೆಪ್ಟೆಂಬರ್ 2019, 19:30 IST
ಸುಮೀತ್‌ ನಗಾಲ್‌
ಸುಮೀತ್‌ ನಗಾಲ್‌   

ಬ್ಯೂನಸ್‌ ಏರ್ಸ್‌, ಆರ್ಜೆಂಟೀನಾ: ಭಾರತದ ಸುಮೀತ್‌ ನಗಾಲ್‌ ನೇರ ಸೆಟ್‌ಗಳಿಂದ ಸ್ಥಳೀಯ ನೆಚ್ಚಿನ ಆಟಗಾರ ಫಾಕುಂಡೊ ಬೊಗ್ನಿಸ್‌ ಅವರನ್ನು ಸೋಲಿಸಿ 54,160 ಡಾಲರ್‌ ಬಹುಮಾನದ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.

ಈ ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಪಡೆದಿದ್ದ ಫೈನಲ್‌ನಲ್ಲಿ ನಗಾಲ್‌ 6–4, 6–2 ರಿಂದ ಎಂಟನೇ ಶ್ರೇಯಾಂಕದ ಬೊಗ್ನಿಸ್‌ ಅವರನ್ನು ಸೋಲಿಸಿದರು. ಫೈನಲ್‌ ಒಂದು ಗಂಟೆ 37 ನಿಮಿಷಗಳವರೆಗೆ ಬೆಳೆಯಿತು.

22 ವರ್ಷದ ಹರ್ಯಾಣ ಆಟಗಾರ ಸುಮೀತ್‌ಗೆ ಇದು ವೃತ್ತಿ ಜೀವನದ ಎರಡನೇ ಚಾಲೆಂಜರ್ ಪ್ರಶಸ್ತಿ. 2017ರಲ್ಲಿ ಬೆಂಗಳೂರಿನಲ್ಲಿ ಅವರು ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ADVERTISEMENT

ಈ ಗೆಲುವಿನಿಂದ ಸೋಮವಾರ ಪ್ರಕಟವಾದ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅವರು 26 ಸ್ಥಾನಗಳಷ್ಟು ಮೇಲಕ್ಕೆ ಜಿಗಿದು 135ನೇ ಸ್ಥಾನದಲ್ಲಿದ್ದರೆ.

ಕಳೆದ ತಿಂಗಳು ಅಮೆರಿಕ ಓಪನ್‌ನಲ್ಲಿ ಮೊದಲ ಬಾರಿ ಆಡುವ ಮೂಲಕ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ನಗಾಲ್‌ ಮೊದಲ ಸುತ್ತಿನಲ್ಲಿ ಫೆಡರರ್‌ ಎದುರು ಸೋಲನುಭವಿಸುವ ಮೊದಲು ಪೈಪೋಟಿ ನೀಡಿ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.