ADVERTISEMENT

ಡಬಲ್ಸ್‌ನಲ್ಲಿ ನಗಾಲ್‌ಗೆ ನಿರಾಸೆ

ಪಿಟಿಐ
Published 17 ಜುಲೈ 2024, 20:53 IST
Last Updated 17 ಜುಲೈ 2024, 20:53 IST
   

ಬೊಸ್ತಾದ್‌, ಸ್ವೀಡನ್‌: ಭಾರತದ ಸುಮಿತ್‌ ನಗಾಲ್‌ ಮತ್ತು ಅವರ ಪೋಲೆಂಡ್‌ನ ಜೊತೆಗಾರ ಕರೋಲ್ ಡ್ರೆಜೆವಿಕಿ ಅವರು ನಾರ್ಡಿಯಾ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು.

ಮಂಗಳವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಭಾರತ– ಪೋಲೆಂಡ್‌ ಜೋಡಿಯು 3–6, 4–6 ಸೆಟ್‌ಗಳಿಂದ ಫ್ರಾನ್ಸ್‌ನ ಅಲೆಕ್ಸಾಂಡ್ರೆ ಮುಲ್ಲರ್ ಮತ್ತು ಲುಕಾ ವ್ಯಾನ್ ಆಸ್ಚೆ ಅವರಿಗೆ ಮಣಿಯಿತು.

26 ವರ್ಷದ ನಗಾಲ್‌ ಅವರು ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದು, ಗುರುವಾರ
ಅರ್ಜೆಂಟೀನಾದ ಮರಿಯಾನೊ ನವೋನ್ ಅವರನ್ನು ಎದುರಿಸುವರು.

ADVERTISEMENT

ಈ ಮಧ್ಯೆ ಭಾರತದ ಅನುಭವಿ ಆಟಗಾರ ರೋಹನ್‌ ಬೋಪಣ್ಣ ಮತ್ತು ಎನ್‌.ಶ್ರೀರಾಮ್‌ ಬಾಲಾಜಿ ಅವರು ಜರ್ಮನಿಯ ಹ್ಯಾಂಬರ್ಗ್‌
ನಲ್ಲಿ ನಡೆಯುತ್ತಿರುವ ಹ್ಯಾಂಬರ್ಗ್ ಓಪನ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ಗುರುವಾರ ನಡೆಯುವ ಮೊದಲ ಸುತ್ತಿನಲ್ಲಿ ಜರ್ಮನಿಯ ಜೇಕಬ್ ಷ್ನೈಟರ್ ಮತ್ತು ಮಾರ್ಕ್ ವಾಲ್ನರ್ ಅವರ ವಿರುದ್ಧ ಅಭಿಯಾನ ಆರಂಭಿಸುವರು.

ಜುಲೈ 26ರಂದು ಆರಂಭವಾಗುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೋಪಣ್ಣ ಮತ್ತು ಬಾಲಾಜಿ ಅವರು ಪುರುಷರ ಡಬಲ್ಸ್‌ನಲ್ಲಿ ಕಣಕ್ಕೆ ಇಳಿಯುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.